ಸುದ್ದಿ 

ತಪ್ಪು ದಿಕ್ಕಿನಲ್ಲಿ ಬಂದ ಬೈಕ್ ಡಿಕ್ಕಿ: ಮೂವರು ಗಾಯಗೊಂಡ ಘಟನೆ..

Taluknewsmedia.com

ತಪ್ಪು ದಿಕ್ಕಿನಲ್ಲಿ ಬಂದ ಬೈಕ್ ಡಿಕ್ಕಿ: ಮೂವರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ವಡೇರಹಳ್ಳಿ ಗೇಟ್ ಬಳಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದೆ. ಈ ಬಗ್ಗೆರಾಕೇಶ್ ಕುಮಾರ್ ಯಾದವ್ ಅವರು ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಉತ್ತರ ಪ್ರದೇಶದ ಪ್ರಯಾಗರಾಜ್ ಮೂಲದ ರಾಕೇಶ್ ಕುಮಾರ್ ಯಾದವ್ (32) ಅವರು ತಮ್ಮ ಸ್ನೇಹಿತ ಅವದೇಶ್ ಜೊತೆಗೆ ಹೀರೋ ಎಚ್‌ಎಫ್ ಡಿಲಕ್ಸ್ ಬೈಕ್ (MH-48 DA-4715) ನಲ್ಲಿ ಎಡೆಯೂರಿಗೆ ತೆರಳುತ್ತಿದ್ದಾಗ, ವಡೇರಹಳ್ಳಿ ಗೇಟ್ ಬಳಿ ಎದುರು ದಿಕ್ಕಿನಲ್ಲಿ ತಪ್ಪು ಮಾರ್ಗವಾಗಿ ಬಂದ ಬಜಾಜ್ ಡಿಸ್ಕವರ್ ಬೈಕ್ (KA-02 E-2491) ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ.ಈ ಅಪಘಾತದಲ್ಲಿ ಅವದೇಶ್ ಅವರಿಗೆ ತಲೆ, ಮುಖ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ರಾಕೇಶ್‌ ಅವರಿಗೆ, ಎಡಗೈ ಮೊಣಕೈ ಮತ್ತು ತಲೆಗೆ ಪೆಟ್ಟಾಗಿದೆ. ಡಿಕ್ಕಿಯಾದ ಬೈಕ್‌ನ ಸವಾರನಿಗೂ ಗಾಯವಾಗಿದ್ದು, ಎರಡೂ ಬೈಕ್‌ಗಳು ಅಪಘಾತದಲ್ಲಿ ಜಖಂಗೊಂಡಿವೆ.ಸ್ಥಳೀಯ ನಾಗರಿಕರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವದೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಕೇಶ್ ಅವರು ತಾವು ಕೆಲಸಮಾಡುವ ಹರ್ಷ ಗ್ರಾಂಡ್ ಹೋಟೆಲ್ ಮಾಲಿಕ ಲಕ್ಷ್ಮೀಕಾಂತ್ ಪಾಟಕ್ ರವರ ಸಹಾಯದಿಂದ ಆಸ್ಪತ್ರೆಗೆ ತೆರಳಿದ್ದಾರೆ.ಅಪಘಾತದ ಕುರಿತು ರಾಕೇಶ್ ಕುಮಾರ್ ಅವರು ದೂರು ನೀಡಿದ ಹಿನ್ನೆಲೆಯಲ್ಲಿ, ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 97/2025 ಅಡಿಯಲ್ಲಿ ಭಾರತ ಹೊಸ ದಂಡ ಸಂಹಿತೆ (BNS) ಸೆಕ್ಷನ್ 281 ಮತ್ತು 125(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಅಪಘಾತದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವರದಿ :ಧನುಷ್ ಎ ಗೌಡ ಕಾಚೇನಹಳ್ಳಿ ತಾಲೂಕ್ ನ್ಯೂಸ್

Related posts