ಸುದ್ದಿ 

ಪೆಟರ್‌ನಿಂದ ಜಗಳ ಹಾಗೂ ಹಲ್ಲೆ – ಜೀವ ಬೆದರಿಕೆ ಆರೋಪ

Taluknewsmedia.com

ನಗರದ ಕಸಘಟ್ಟ ಪುರ ಜನತಾ ಕಾಲನಿಯಲ್ಲಿ ತೀವ್ರ ಹಲ್ಲೆ ಮತ್ತು ಜಗಳದ ಘಟನೆ ನಡೆದಿದೆ. ಈ ಕುರಿತು ಸಂಬಂಧಿಕ ವ್ಯಕ್ತಿ ಪೇತ್ರ @ ಪೀಟರ್ ವಿರುದ್ಧ ಪಿರ್ಯಾದು ದಾಖಲಾಗಿದೆ.

ಅರ್ಪಿತಾ ರವರು ನೀಡಿದ ಮಾಹಿತಿಯ ಪ್ರಕಾರ, ಅವರು ತಮ್ಮ ಮನೆದಲ್ಲಿ ವಾಸವಿದ್ದು, ಗೃಹಿಣಿಯಾಗಿರುತ್ತಾರೆ. ಅವರ ಅಕ್ಕ ಹರ್ಷಿತಾರವರನ್ನು ಎರಡು ವರ್ಷಗಳ ಹಿಂದೆ ಪೇತ್ರ @ ಪೀಟರ್ ರವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಪೇತ್ರ ಮತ್ತು ಹರ್ಷಿತಾ ಅವರು ಕಸಘಟ್ಟ ಪುರ ಜನತಾ ಕಾಲನಿಯಲ್ಲಿ ವಾಸಿಸುತ್ತಿದ್ದಾರೆ.

ದಿನಾಂಕ 28-06-2025 ರಂದು ರಾತ್ರಿ 09:00 ಗಂಟೆಯ ಸಮಯದಲ್ಲಿ ಪೇತ್ರ @ ಪೀಟರ್ ಅವರು ಅರ್ಪಿತಾ ರವರ ಮನೆಗೆ ಬಂದು, ಕ್ಷುಲಕ ಕಾರಣಕ್ಕಾಗಿ ಜಗಳವಾಡಿದ್ದು, ಅವಾಚ್ಯ ಶಬ್ದಗಳಿಂದ ಬೈದು ಮನೆಯ ಹೊರಗಿದ್ದ ಮರದ ರಿಪೀಲ್ (ಕಟ್ಟಿಗೆ) ಅನ್ನು ತೆಗೆದುಕೊಂಡು ಅರ್ಪಿತಾ ರವರ ತಂದೆ ಮೈಕಲ್ ಬಾಬುರವರ ತಲೆಗೆ ಹೊಡೆದಿದ್ದಾರೆ. ಇದರಿಂದ ರಕ್ತಗಾಯ ಸಂಭವಿಸಿದ್ದು, ಅಲ್ಲದೆ ಅವರನ್ನು ಸಾಯಿಸುವುದಾಗಿ ಜೀವ ಬೆದರಿಕೆಯೂ ಹಾಕಿದ್ದಾರೆ. ಅರ್ಪಿತಾ ರವರಿಗೆ ಅವಾಚ್ಯ ಶಬ್ದಗಳಲ್ಲಿ ನಿಂದನೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅರ್ಪಿತಾ ರವರು ಈ ಕುರಿತಂತೆ ಸಮೀಪದ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೇತ್ರ @ ಪೀಟರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Related posts