ಬೈಕ್ ಅಪಘಾತ: ಯುವಕನಿಗೆ ತೀವ್ರ ಗಾಯ – ಯಲಹಂಕದಲ್ಲಿ ಮಧ್ಯರಾತ್ರಿ ಘಟನೆ
ಬೆಂಗಳೂರು, ಜುಲೈ 3. 2025
ಯಲಹಂಕದ ಬಿ.ಬಿ.ಸರ್ವಿಸ್ ರಸ್ತೆ ಬಳಿ ಮಧ್ಯರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಒಂದು ಡಾಮಿನಾರ್ ಬೈಕ್ (ನಂ. KA-23-XX-1387) ಅತಿವೇಗದಿಂದ ನಿಯಂತ್ರಣ ತಪ್ಪಿ ಬಿದ್ದಿದ್ದು, ಹಿಂಬದಿ ಸವಾರನಾದ ಅಜಯ್ ಇ. (ವಯಸ್ಸು: 22) ತಲೆಗೆ ಗಂಭೀರವಾಗಿ ಪಟ್ಟು ಬಿದ್ದು ತೀವ್ರ ಗಾಯಗೊಂಡಿದ್ದಾರೆ.
ಬೈಕ್ ನ ಫ್ರಂಟ್ ಸವಾರ ಸಂಜನಾ ಶಿವಾನ್ (ವಯಸ್ಸು: 21) ಅವರಿಗೆ ಸಣ್ಣ ಪುಟ್ಟ ಗಾಯಗಳುಾಗಿದ್ದು, ಅವರು ಸ್ಥಳದಲ್ಲೇ ಸಾರ್ವಜನಿಕರ ಸಹಾಯದಿಂದ ಗಾಯಾಳು ಅಜಯ್ ರವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ನಿಮಹಾನ್ಸ್ ಮತ್ತು ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಯಲಹಂಕ ಸಂಚಾರಿ ಪೊಲೀಸ್ ವರದಿಯ ಪ್ರಕಾರ, ಅಪಘಾತದ ಮುಖ್ಯ ಕಾರಣ ಅತಿವೇಗ ಹಾಗೂ ಅಜಾಗರೂಕ ಚಾಲನೆ ಎಂದು ತಿಳಿದುಬಂದಿದೆ. ಸುಂದರ್ ರಾಜ್ ಪಿ ನಂತರ ಅಜಯ್ ಅವರ ಕುಟುಂಬದವರ ಜೊತೆ ಚರ್ಚಿಸಿ ಠಾಣೆಗೆ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ತನಿಖೆಗೊಳಪಡಿಸಿರುವ ಯಲಹಂಕ ಸಂಚಾರಿಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ.


