ಯುವತಿ ಕಾಣೆಯಾದ ಪ್ರಕರಣ: ತಾಯಿ ಪೊಲೀಸರಿಗೆ ದೂರು ನೀಡಿದ ಘಟನೆ…
ಯುವತಿ ಕಾಣೆಯಾದ ಪ್ರಕರಣ ತಾಯಿ ನೀಡಿದ ದೂರಿನ ಪ್ರಕಾರ, 19 ವರ್ಷದ ಯುವತಿ ಸರಿನಾ ಗ್ರೇಸ್ ಅವರು ದಿನಾಂಕ 11 ಜೂನ್ 2025 ರಂದು ಮಧ್ಯಾಹ್ನ “ಅಂಗಡಿಗೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಅವರು ಮನೆಗೆ ವಾಪಸ್ ಬಾರದ ಕಾರಣ, ಕುಟುಂಬಸ್ಥರು ಆತಂಕಗೊಂಡು ಎಲ್ಲೆಲ್ಲಿಯೂ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ದೊರೆತಿಲ್ಲ.ಯುವತಿ ಕಾಣೆಯಾದ ಹಿನ್ನೆಲೆಯಲ್ಲಿ ಅವರ ತಾಯಿ ಶ್ರೀಮತಿ ಟೈಕಲ್ ರವರು ಕಳೆದ ಕೆಲ ದಿನಗಳಿಂದ ಶೋಧಿಸಿ, ಯಾವುದೇ ಸುಳಿವು ಸಿಕ್ಕದ ಕಾರಣ ದಿನಾಂಕ 25/06/2025 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ತಾವು ಕೊಟ್ಟಿರುವ ದೂರಿನಲ್ಲಿ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.ಗಂಗಮ್ಮ ಗುಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸರಿನಾ ಗ್ರೇಸ್ ಅವರನ್ನು ಕೊನೆಯದಾಗಿ ಯಾರೊಂದಿಗೆ, ಯಾವ ಸ್ಥಳದಲ್ಲಿ ನೋಡಲಾಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ. ಸ್ಥಳೀಯ ನಿವಾಸಿಗಳು ಅಥವಾ ಸಂಬಂಧಪಟ್ಟವರು ಯಾವುದೇ ಮಾಹಿತಿ ಹೊಂದಿದ್ದಲ್ಲಿ ಗಂಗಮ್ಮ ಗುಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

