20 ವರ್ಷದ ಕಾಲೇಜು ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಕಾಣೆ!
ಬೆಂಗಳೂರು ನಗರದ ನಿವಾಸಿ ಯಾದ ಲಕ್ಷ್ಮಿ ಅವರ ಮಗಳು ಕುllಐಶ್ವರ್ಯ (ವಯಸ್ಸು 20), ಡಿಗ್ರಿ 3ನೇ ವರ್ಷದಲ್ಲಿ ಶಾಸ್ತ್ರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪರೀಕ್ಷೆಗಾಗಿ ರಜೆ ಇರುವುದು ಕಾರಣ ಮನೆದಲ್ಲಿದ್ದ ಅವರು, 26 ನೇ ಜೂನ್ 2025 ರಂದು ಮದ್ಯಾಹ್ನ ಸುಮಾರು 03:00 ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದು, ಬಳಿಕ ವಾಪಸ್ಸು ಬಂದಿಲ್ಲ.ಪರಿವಾರದವರು ಸಂಬಂಧಿಕರು, ಸ್ನೇಹಿತರು, ಪರಿಚಿತರು ಸೇರಿದಂತೆ ಎಲ್ಲೆಡೆ ಹುಡುಕಿದರೂ ಹುಡುಗಿಯ ಬಗ್ಗೆ ಯಾವುದೇ ಮಾಹಿತಿ ಲಭಿಸದ ಕಾರಣ, ಅವರು ಗಂಗಮ್ಮ ಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯುವತಿಯ ಪತ್ತೆಗೆ ಮುಂದಾಗಿದ್ದಾರೆ. ಸಾರ್ವಜನಿಕರಲ್ಲಿ ಯಾರಾದರೂ ಐಶ್ವರ್ಯ ಬಗ್ಗೆ ಮಾಹಿತಿ ಹೊಂದಿದ್ದರೆ, ತಮ್ಮ ಸಮೀಪದ ಪೊಲೀಸ್ ಠಾಣೆಗೆ ತಕ್ಷಣವೇ ಮಾಹಿತಿ ನೀಡುವಂತೆ ಕುಟುಂಬದವರು ಹಾಗೂ ಪೊಲೀಸ್ ಇಲಾಖೆ ವಿನಂತಿಸಿದೆ.

