ಸುದ್ದಿ 

ಜಯಮಹಲ್ ಹೋಟೆಲ್ ಬಳಿ ಬೈಕ್ ಡಿಕ್ಕಿ – ದಂಪತಿಗೆ ಗಾಯ, ಗಂಡ ಆಸ್ಪತ್ರೆಗೆ ದಾಖಲು

Taluknewsmedia.com

ನಗರದ ಜೆಸಿ ನಗರ ಬಳಿ ಇಂದು ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಂಪತಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಗಂಡನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜಾಗರೂಕವಾಗಿ ವಾಹನ ಚಲಾಯಿಸಿದ್ದ ಬೈಕ್ ಸವಾರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಮಾಹಿತಿಯ ಪ್ರಕಾರ, ಅಜಯ್ (36) ಎಂಬುವರುತಮ್ಮ ಪತ್ನಿಯನ್ನು ಹಿಂಬದಿ ಸವಾರನಾಗಿ ಕೂರಿಸಿಕೊಂಡು, ತಮ್ಮ ದ್ವಿಚಕ್ರ ವಾಹನ (ನೋಂದಣಿ ಸಂಖ್ಯೆ KA-04-HA-1827) ಮೇಲೆ ಜೆ ಸಿ ನಗರ ಪೊಲೀಸ್ ಠಾಣೆಯ ಕಡೆಯಿಂದ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಕಡೆಗೆ ಸಾಗುತ್ತಿದ್ದರು. ಬೆಳಿಗ್ಗೆ 10:00 ಗಂಟೆ ವೇಳೆಗೆ ಅವರು ಜಯಮಹಲ್ ಪ್ಯಾಲೇಸ್ ಹೋಟೆಲ್ ಹತ್ತಿರ, 18 ಸ್ಪೋಟ್ಸ್ ಕಾಂಪ್ಲೆಕ್ಸ್ ಹಾಗೂ ಚಾಮುಂಡಿ ಹೋಟೆಲ್ ಕಾಂಪೌಂಡ್ ಬಳಿಗೆ ಬಂದಾಗ, ಹಿಂದಿನಿಂದ ಬಂದ ಬೈಕ್ (ನೋಂದಣಿ ಸಂಖ್ಯೆ KA-04-KX-0260) ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಇವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.ಈ ಡಿಕ್ಕಿಯ ಪರಿಣಾಮವಾಗಿ ದಂಪತಿ ವಾಹನ ಸಮೇತ ರಸ್ತೆ ಮೇಲೆ ಬಿದ್ದುಹೋಗಿದ್ದಾರೆ. ಪತ್ನಿಗೆ ಸಣ್ಣ ಪೆಟ್ಟಾಗಿದ್ದರೆ, ಗಂಡ ಅಜಯ್‌ರ ಬಲಭುಜಕ್ಕೆ ತೀವ್ರ ಗಾಯವಾಗಿದೆ. ಸ್ಥಳೀಯ ಜನರ ಸಹಾಯದಿಂದ ಅವರನ್ನು ತಕ್ಷಣವೇ ಮಹಾವೀರ್ ಜೈನ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಅಜಯ್‌ರನ್ನು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಘಟನೆ ಸಂಬಂಧ ಪತ್ನಿ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಬೈಕ್‌ ನಂ. KA-04-KX-0260 ಸವಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.

Related posts