ಅದಿಚುಂಚನಗಿರಿ ಆಸ್ಪತ್ರೆಯಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣೆ ಶಿಬಿರ.
ಮಂಡ್ಯ, ಜುಲೈ 3, 2025: ಮಾನವೀಯತೆಯ ನಿಜವಾದ ಉದಾಹರಣೆಯಾಗಿ, ಅದಿಚುಂಚನಗಿರಿ ಟ್ರಸ್ಟ್ ಹಾಗೂ ಅದಿಚುಂಚನಗಿರಿ ಆಸ್ಪತ್ರೆ, ಕನ್ನಡ ಮಾಧ್ಯಮ ಯುವ ಫೌಂಡೇಶನ್ ಸಹಯೋಗದಲ್ಲಿ, ಅಗತ್ಯವಿರುವವರಿಗೆ ಉಚಿತವಾಗಿ ಕೃತಕ ಕೈ ಹಾಗೂ ಕಾಲು ಜೋಡಣೆ ಶಿಬಿರವನ್ನು ಆಯೋಜಿಸುತ್ತಿದೆ.ಈ ಶಿಬಿರ ಜುಲೈ 10 ರಿಂದ 20, 2025 ರವರೆಗೆ, ಅದಿಚುಂಚನಗಿರಿ ಆಸ್ಪತ್ರೆ, ಬಿ.ಜಿ.ನಗರ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ. ಶಿಬಿರದಲ್ಲಿ ಅಂಗವಿಕಲರಾದವರು ಅಥವಾ ಕಾಲು/ಕೈ ಕಳೆದುಕೊಂಡವರು (Amputation ಆದವರು) ಉಚಿತವಾಗಿ ಕೃತಕ ಅಂಗಗಳನ್ನು ಪಡೆದುಕೊಳ್ಳಬಹುದು.ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಈ ಶಿಬಿರ ನಡೆಯಲಿದೆ.
ಸಮಾಜದ ಹಿತಕ್ಕಾಗಿ ಪ್ರೋತ್ಸಾಹಿತವಾಗಿರುವ ಈ ಕಾರ್ಯಕ್ರಮವು ಹಲವು ಜೀವಗಳಿಗೆ ಹೊಸ ಆಶಾಕಿರಣ ಒದಗಿಸಲಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9945558759, 9632834071, 7975102982
ವರದಿ : ಧನುಷ್ ಎ ಗೌಡ, ಕಾಚೇನಹಳ್ಳಿ ತಾಲೂಕು ನ್ಯೂಸ್


