ಅಜಾಗರೂಕ ಬೈಕ್ ಸವಾರನಿಂದ ನಾಕಾಬಂದಿ ವೇಳೆ ಅಪಘಾತ – ಎ.ಎಸ್.ಐ ಸೇರಿದಂತೆ ಮೂವರಿಗೆ ಗಾಯ
ನಗರದ ವೀರಣ್ಯನಪಾಳ್ಯ ಜಂಕ್ಷನ್ ಬಳಿ ನಾಕಾಬಂದಿ ಸಂದರ್ಭದಲ್ಲಿ ನಡೆದ ಅಪಘಾತದಲ್ಲಿ ಎ.ಎಸ್.ಐ, ಪಿ.ಸಿ ಮತ್ತು ಇಬ್ಬರು ನಾಗರಿಕರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಬೆಳಗಿನ ಜಾವ 03:00 ಗಂಟೆ ವೇಳೆಗೆ, ಎ.ಎಸ್.ಐ ರಂಗೇಗೌಡ, ಪಿ.ಸಿ 20602 ಈರನಗೌಡ, ಮತ್ತು ಇನ್ನೋರ್ವ ಪೊಲೀಸ್ ಸಿಬ್ಬಂದಿ ನಾಕಾಬಂದಿ ಕರ್ತವ್ಯದಲ್ಲಿದ್ದರು. ಈ ವೇಳೆ, KL-55-D-5165 ಸಂಖ್ಯೆಯ ಮೋಟಾರ್ ಸೈಕಲ್ ಸವಾರನು ಹೆಲ್ಮೆಟ್ ಧರಿಸದೆ, ಇಬ್ಬರನ್ನು ಹಿಂಬದಿ ಕೂರಿಸಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಲಾಯಿಸುತ್ತಿದ್ದನು.
ಆ ಸವಾರ ಡಿಕ್ಕಿ ಹೊಡೆದ ಪರಿಣಾಮ, ಮೂರೂ ಜನರು ಕೆಳಗೆ ಬಿದ್ದು ಗಾಯಗೊಂಡರು.ಎ.ಎಸ್. ಐ ರಂಗೇಗೌಡ,ಪಿ.ಸಿ ಮತ್ತು ಈರಣ್ಣ ಗೌಡ ರವರಿಗೆ ಎಡಗೈ, ಕತ್ತು, ಬೆನ್ನು, ಕಾಲುಗಳು ಹಾಗೂ ಮುಖಕ್ಕೆ ಪೆಟ್ಟಾಗಿದ್ದರೆ, ಸವಾರ ಮತ್ತು ಹಿಂಬದಿ ಸವಾರರು ಸಹ ಗಾಯಗೊಂಡಿದ್ದಾರೆ.
ಅಪಘಾತದ ಬಳಿಕ ಗಾಯಾಳುಗಳನ್ನು ತಕ್ಷಣವೇ ಈಶಾ ಆಸ್ಪತ್ರೆಗೆ ಮತ್ತು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಯ ಕುರಿತಾಗಿ ಸವಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

