ಸುದ್ದಿ 

ಮರಿಯಣ್ಯಪಾಳ್ಯದಲ್ಲಿ ಅಪಘಾತ: ಹಿರಿಯ ನಾಗರಿಕನಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲು

Taluknewsmedia.com

ಮರಿಯಣ್ಯಪಾಳ್ಯದ ಸೆಂಟ್ ಪೀಟರ್ ಚರ್ಚ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತರುಣ್ ಕುಮಾರ್ ಮಂಡಲ್ (63) ಎಂಬ ಹಿರಿಯ ನಾಗರಿಕ ಗಾಯಗೊಂಡ ಘಟನೆ ನಡೆದಿದೆ.

ಶ್ರೀ ಶಾಂತನ್ ಮೋದಕ್ (32) ಅವರು ನೀಡಿದ ದೂರಿನ ಪ್ರಕಾರ, ದಿನಾಂಕ 26.06.2025 ರಂದು ಸಂಜೆ 7.30 ಗಂಟೆ ಸುಮಾರಿಗೆ ತರುಣ್ ಕುಮಾರ್ ಮಂಡಲ್ ಅವರು ವಾಕಿಂಗ್ ಹೋಗುತ್ತಿದ್ದರು. ಈ ವೇಳೆ ಹಿಂದೆಯಿಂದ ಬಂದ ಕೊನೆಯ ಸಂಖ್ಯೆಯು 5441 ಆಗಿರುವ ದ್ವಿಚಕ್ರ ವಾಹನದ ಸವಾರನು ತನ್ನ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ತರುಣ್ ಕುಮಾರ್ ಮಂಡಲ್ ಅವರಿಗೆ ಡಿಕ್ಕಿ ಹೊಡೆದಿದ್ದಾನೆ.

ಅಪಘಾತದ ನಂತರ ವಾಹನ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ತರುಣ್ ಕುಮಾರ್ ಅವರನ್ನು ಸಾರ್ವಜನಿಕರ ನೆರವಿನಿಂದ ತಕ್ಷಣ ಆಸ್ಟರ್ CMI ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರ ಪ್ರಕಾರ ಅವರಿಗೆ ಎಡಭಾಗದ ಸೊಂಟದ ಪೆಲ್ವಿಕ್ ಭಾಗದಲ್ಲಿ ಗಂಭೀರ ಪೆಟ್ಟುಬಿದ್ದು ಶಸ್ತ್ರಚಿಕಿತ್ಸೆ ಅಗತ್ಯವಿದೆ.

Related posts