ಕಾರ್ ಡ್ರೈವರ್ ಅರುಣ್ ಕುಮಾರ್ ನಾಪತ್ತೆ – ಪತ್ನಿಯಿಂದ ಠಾಣೆಗೆ ದೂರು
ಬೆಂಗಳೂರ ನಗರದಲ್ಲಿ ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಅರುಣ್ ಕುಮಾರ್ ಎಂಬುವರುಮೂರು ದಿನಗಳಿಂದ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಅವರ ಪತ್ನಿ ದಿನಾಂಕ 26/06/2025 ರಂದು ಸಂಜೆ 5:30 ಗಂಟೆಗೆ ಸ್ಥಳೀಯ ಸರ್ಜಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ತಿಳಿಸಿದಂತೆ, ಅರುಣ್ ಕುಮಾರ್ ಅವರು ದಿನಾಂಕ 23/06/2025 ರಂದು ಬೆಳಿಗ್ಗೆ 10:00 ಗಂಟೆಗೆ ತಮ್ಮ ನಿತ್ಯದ ಕೆಲಸಕ್ಕಾಗಿ ಹೊರಡಿದ್ದರು. ಅವರು ಹೋಗಿರುವುದರಿಂದ ಇಂದಿನವರೆಗೂ ಮನೆಗೆ ಮರಳಿಲ್ಲ. ಸಂಬಂಧಿಕರು ಹಾಗೂ ಪತ್ನಿ ಎಲ್ಲೆಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಪತ್ನಿಯ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ನಾಪತ್ತೆಯಾದ ಅರುಣ್ ಕುಮಾರ್ ಅವರ ಪತ್ತೆಗೆ ಬೃಹತ್ ಹುಡುಕಾಟ ಆರಂಭವಾಗಿದೆ.
ಯಾರಾದರೂ ಅರುಣ್ ಕುಮಾರ್ ಅವರ ಬಗ್ಗೆ ಮಾಹಿತಿ ಹೊಂದಿದ್ದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪೊಲೀಸರು ಸಾರ್ವಜನಿಕರನ್ನು ಮನವಿ ಮಾಡಿದ್ದಾರೆ.

