ಶೆಟ್ಟಿಹಳ್ಳಿಯ ವಿದ್ಯಾರ್ಥಿ ನಾಪತ್ತೆ: ಕುಟುಂಬದಲ್ಲಿಂದು ಆತಂಕ
ಬೆಂಗಳೂರು, ಜುಲೈ 4, 2025: ನಾರಾಯಣ ಕಾಲೇಜು ಶೆಟ್ಟಿಹಳ್ಳಿಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಹರ್ಷನ್ ಎಸ್ (17) ಎಂಬ ವಿದ್ಯಾರ್ಥಿ ಕಳೆದ ಭಾನುವಾರದ ನಂತರದಿಂದ ನಾಪತ್ತೆಯಾಗಿರುವ ಘಟನೆ ಮಾಲೂರಿನ ಸೋಲದೇವನಹಳ್ಳಿ ಸಮೀಪ ನಡೆದಿದೆ.
ಹರ್ಷನ್ ಕಳೆದ 27 ಜೂನ್ 2025 ರಿಂದ ಕಾಲೇಜಿಗೆ ತೆರಳುತ್ತಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಕಾಲೇಜು ಫೀಸ್ ಪಾವತಿಸದ ಕಾರಣ ರಜೆ ಹಾಕಿದ್ದ ಹರ್ಷನ್‌ಗೆ, ತಂದೆ ಸೋಮವಾರ ಫೀಸ್ ಪಾವತಿಸುತ್ತೇನೆ ಎಂದು ತಿಳಿಸಿದ್ದರೂ, ಆ ನಂತರವೂ ಹುಡುಗನ ವರದಿ ಇಲ್ಲ.
ಜುಲೈ 29 ರಂದು ಭಾನುವಾರ, ಹರ್ಷನ್ ತನ್ನ ಮಾವ ಮಂಜುನಾಥ್ ಅವರೊಂದಿಗೆ ಕೋಳಿಗಳನ್ನು ಮಾರಾಟ ಮಾಡಲು ಸೋಲದೇವನಹಳ್ಳಿಗೆ ಹೋಗಿದ್ದ. ಮಾರಾಟದ ನಂತರ ಮದ್ಯಾಹ್ನ 3 ಗಂಟೆಗೆ ಬೈಕ್‌ನಲ್ಲಿ ವಾಪಸ್ಸಾಗುವಾಗ, ರೈಲ್ವೆ ಹಳಿಯ ಬಳಿ ಹರ್ಷನ್ ತಮ್ಮ ಮಾವನಿಗಿಂತ ಮುಂಚೆ ಹೋಗಿ ಕಾಣೆಯಾಗಿದ್ದಾನೆ. ಮಾವನು ರೈಲ್ವೆ ಹಳಿ ದಾಟಿ ಪಕ್ಕಕ್ಕೆ ನಿಂತು ಕಾಯುತ್ತಿದ್ದರೂ, ಹರ್ಷನ್ ಹಿಂದಿನಿಂದ ಬರಲೇ ಇಲ್ಲ. ಹುಡುಗ ಬೈಕ್‌ನೊಂದಿಗೆ ನಾಪತ್ತೆಯಾಗಿದ್ದು, ಕುಟುಂಬ ಸದಸ್ಯರು ವಿವಿಧ ಕಡೆ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಕಾಣೆಯಾದ ಹರ್ಷನ್‌ನ ಚಹರೆ ವಿವರ:
ಹರ್ಷನ್ ಎಸ್, 17 ವರ್ಷ, ಎತ್ತರ 5.8 ಅಡಿ, ಅಷ್ಟು ಮೈಬಣ್ಣ, ಅಪ್ಪು ಕೂದಲು, ದುಂಡು ಮುಖ, ಎಡಗೈಯಲ್ಲಿ ಗಾಯದ ಗುರುತು. ಕತ್ತಿನಲ್ಲಿ ಸ್ಪಟಿಕ್ ಮಣಿಯ ಹಾರ, ಗುಲಾಬಿ ಬಣ್ಣದ ಟಿ-ಶರ್ಟ್ ಮತ್ತು ಕೆಂಪು ಟ್ರ್ಯಾಕ್ ಪ್ಯಾಂಟ್ ಧರಿಸಿದ್ದನು. ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾನೆ.
ಈ ಬಗ್ಗೆ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಡುಗನ ಪತ್ತೆಗೆ ತನಿಖೆ ಪ್ರಾರಂಭವಾಗಿದೆ. ಸಾರ್ವಜನಿಕರು ಯಾರಾದರೂ ಹುಡುಗನ ಬಗ್ಗೆ ಮಾಹಿತಿ ಹೊಂದಿದ್ದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.


