ಸುದ್ದಿ 

ಆನೇಕಲ್‍ನಲ್ಲಿ 18 ವರ್ಷದ ಯುವತಿ ಕಣ್ಮರೆ ಬಗ್ಗೆ ಪೊಲೀಸ್ ಠಾಣೆಗೆ ಮನವಿ

Taluknewsmedia.com

ಆನೇಕಲ್, ಜುಲೈ 4, 2025 :ಆನೇಕಲ್ ಟೌನ್ ನ ನಾರಾಯಣಪುರದಲ್ಲಿ ವಾಸವಿರುವ ಶ್ರೀಮತಿ ಇಂದ್ರಮ್ಮ ಕೊಂ ಮುತ್ತುರಾಜ್ ಅವರ ಮೊಮ್ಮಗಳು ಐಶ್ವರ್ಯ ಎಂ (ವಯಸ್ಸು: 18 ವರ್ಷ 3 ದಿನ) ದಿನಾಂಕ 30/06/2025 ರಿಂದ ಕಾಣೆಯಾಗಿರುವ ಘಟನೆ ಚಿಂತೆ ಹುಟ್ಟಿಸಿದೆ. ಇಂದ್ರಮ್ಮ ನವರ ಹೇಳಿಕೆಯಂತೆ, ಐಶ್ವರ್ಯ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿ ಎ.ಎಸ್.ಬಿ. ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದು, ಚಿಕ್ಕಂದಿನಿಂದಲೇ ಇಂದ್ರಮ್ಮ ಅವರೇ ಆಕೆಯನ್ನು ಸಾಕಿ ಬೆಳೆಸಿದ್ದಾರೆ.

ಸೋಮವಾರ ಬೆಳಿಗ್ಗೆ 9:00 ಗಂಟೆಗೆ ಕಾಲೇಜಿಗೆ ಹೋಗುವ ನೆಪದಲ್ಲಿ ಮನೆಯಿಂದ ಹೊರಟಿದ್ದ ಆಕೆ, ಕಾಲೇಜಿಗೆ ಹೋಗದೇ ಯಾಕೆ ಎಂಬುದು ತಿಳಿದಿಲ್ಲ. ದಿನವಿಡೀ ವಾಪಸ್ಸು ಬಾರದೇ ಮೊಬೈಲ್ ನಂ. 7406041996 ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ಎಲ್ಲಾ ಸಾಧ್ಯ ಸ್ಥಳಗಳಲ್ಲಿ ಹುಡುಕಿದರೂ ಐಶ್ವರ್ಯ ಅವರ ಪತ್ತೆ ಆಗಿಲ್ಲ.

ಕಳೆದ ಕೆಲವೊಮ್ಮೆ ಕಾಲೇಜಿಗೆ ಯೂನಿಫಾರ್ಮ್ ಧರಿಸಿ ಹೋಗುತ್ತಿದ್ದ ಯುವತಿ, ಈ ಬಾರಿ ಕಲರ್ ಡ್ರೆಸ್ ಧರಿಸಿದ್ದುದಾಗಿ ಕುಟುಂಬದವರು ತಿಳಿಸಿದ್ದಾರೆ.

ಕಾಣೆಯಾಗಿರುವ ಯುವತಿಯ ವೈಶಿಷ್ಟ್ಯಗಳು ಈಂತಿವೆ:

ಹೆಸರು: ಐಶ್ವರ್ಯ ಎಂ

ವಯಸ್ಸು: 18 ವರ್ಷ 3 ದಿನ

ತಂದೆ: ಮಹದೇವ

ಬಣ್ಣ: ಗೋಧಿ ಮೈಬಣ್ಣ

ಮುಖಾಕೃತಿ: ಕೋಲು ಮುಖ

ಎತ್ತರ: 5 ಅಡಿ

ಭಾಷೆ: ಕನ್ನಡ, ತಮಿಳು

ಈ ಸಂಬಂಧ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಯಾರಿಗಾದರೂ ಯುವತಿಯ ಕುರಿತು ಯಾವುದೇ ಮಾಹಿತಿ ಸಿಕ್ಕಲ್ಲಿ ತಕ್ಷಣವಾಗಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಮನವಿ ಮಾಡಲಾಗಿದೆ.

Related posts