ಸುದ್ದಿ 

ಹೆಬ್ಬಗೋಡಿನಲ್ಲಿ 25 ವರ್ಷದ ಯುವಕ ಪವನ್ ನಾಪತ್ತೆ – ಮನೆಯಲ್ಲಿದ್ದ ಪತ್ರದಿಂದ ಆತಂಕ ಸೃಷ್ಟಿ

Taluknewsmedia.com

ಹೆಬ್ಬಗೋಡಿನಲ್ಲಿ 25 ವರ್ಷದ ಯುವಕ ಪವನ್ ನಾಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಆತ್ಮೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಪವನ್‌ರ ತಂದೆ ಅವರು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪುತ್ರನ ಶೀಘ್ರ ಪತ್ತೆಗಾಗಿ ಕೋರಿದ್ದಾರೆ.

ಮರಿಸ್ವಾಮಿಯವರ ಪ್ರಕಾರ, ಪವನ್ ಮನೆ ತೊರೆದು ಹೋಗಿರುವುದನ್ನು ದಿನಾಂಕ 28/06/2025 ರಂದು ಮಧ್ಯಾಹ್ನ 2:10ಕ್ಕೆ ಗಮನಕ್ಕೆ ತಂದಿದ್ದಾರೆ. ತಂದೆ, ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ ಪವನ್ ಮನೆಯಲ್ಲಿ ಇರುವುದಿಲ್ಲ. ನಂತರ ಪವನ್‌ ರವರ ಕೋಣೆಯಲ್ಲಿ ಹುಡುಕಿದಾಗ ಆತ ಬರೆದಿದ್ದ ಪತ್ರವೊಂದು ಪತ್ತೆಯಾಗಿದ್ದು, “ನಾನು ಇನ್ನು ಮುಂದೆ ನಿಮಗೆ ಸಿಗುವುದಿಲ್ಲ, ನಾನು ಮನೆಯಿಂದ ಹೊರಡುತ್ತಿದ್ದೇನೆ” ಎಂದು ಬರೆದಿದ್ದಾನೆ.

ಪವನ್ ಮನೆದಲ್ಲಿದ್ದ ಕೆಎ51 ಎಚ್‌ಎನ್ 6618 ಸಂಖ್ಯೆಯ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದಾನೆ. ತನ್ನ ಮೊಬೈಲ್ ಸಂಖ್ಯೆ 8310731391 ಅನ್ನು ಮನೆಯಲ್ಲಿಯೇ ಬಿಟ್ಟು ಹೋಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಕಾಣೆಯಾದ ಪವನ್‌ರ ವಿವರಗಳು:

ವಯಸ್ಸು: 25 ವರ್ಷ

ಮುಖ: ತೋಲು ಮುಖ

ಮೈಕಟ್ಟು: ಸಾಧಾರಣ

ಬಣ್ಣ: ಬಿಳಿ ಮೈಬಣ್ಣ

ಕೂದಲು: ಕಪ್ಪು

ಆಟಿರುತ್ತಿದ ಉಡುಗೆ: ನೇರಳೆ ಬಣ್ಣದ ಪ್ಯಾಂಟ್, ಬೂದು ಬಣ್ಣದ ಶರ್ಟ್ – ಅದರ ಮೇಲೆ “Shree Surya” ಎಂಬ ಇಂಗ್ಲಿಷ್ ಲೆಕ್ಕವಿದೆ

ಭಾಷಾ ಜ್ಞಾನ: ಕನ್ನಡ, ಇಂಗ್ಲಿಷ್, ಹಿಂದಿ ಮಾತನಾಡಲು ಬರುತ್ತದೆ.

ಪವನ್ ಪೋಷಕರಿಗೆ ಯಾವುದೇ ವಿಷಯ ತಿಳಿಸದೇ ಈ ರೀತಿಯಾಗಿ ನಾಪತ್ತೆಯಾಗಿರುವುದು ಅನುಮಾನ ಶಂಕೆ ಹುಟ್ಟಿಸಿದ್ದು, ಪೋಷಕರು ಆತನ ಸುರಕ್ಷತೆಗೆ ಭಯಪಟ್ಟಿದ್ದಾರೆ. ಪವನ್‌ನ ಪತ್ತೆಗಾಗಿ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Related posts