ಸುದ್ದಿ 

ಯಲಹಂಕ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿ ಮತ್ತು ತಾಯಿಗೆ ಹಲ್ಲೆ – ಇಬ್ಬರ ವಿರುದ್ಧ ಎಫ್‌ಐಆರ್

Taluknewsmedia.com

ಬೆಂಗಳೂರು, ಜೂಲೈ 4 2025


ನಗರದ ಯಲಹಂಕದ ಸರ್ಕಾರಿ ಹೈಸ್ಕೂಲ್ ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ಮತ್ತು ಅವಳ ತಾಯಿಯ ಮೇಲೆ ಇಬ್ಬರು ಮಹಿಳೆಯರು ಹಲ್ಲೆ ನಡೆಸಿದ ದಾರುಣ ಘಟನೆ ನಡೆದಿದೆ. ಈ ಘಟನೆ ಜೂನ್ 27ರಂದು ಬೆಳಿಗ್ಗೆ ಸುಮಾರು 11ರಿಂದ 12ರ ಮಧ್ಯೆ ನಡೆದಿದೆ.

ಹಲ್ಲೆಗೊಳಗಾದವರ ಪ್ರಕಾರ, ಹತ್ತನೇ ತರಗತಿಯಲ್ಲಿ ಓದುತ್ತಿರುವ ರಚಿಯಾ ಮತ್ತು ಅವರ ತಾಯಿ ಶಾಲೆಯ ಆವರಣದಲ್ಲಿ ಇದ್ದಾಗ, ಸಿಮ್ರಾನ್ ಎಂಬ ವಿದ್ಯಾರ್ಥಿನಿಯ ತಾಯಿ ಹಾಗೂ ಮತ್ತೊಬ್ಬ ಮಹಿಳೆ ಪುಂಡತನ ಮೆರೆದಿದ್ದಾರೆ. ಇಬ್ಬರ ಮೇಲೂ ಎದೆ ಭಾಗ ಹಾಗೂ ಖಾಸಗಿ ಭಾಗಗಳಲ್ಲಿ ಹೊಡೆದು ಮಾನಸಿಕ ಹಾಗೂ ದೈಹಿಕ ತೊಂದರೆ ಉಂಟುಮಾಡಲಾಗಿದೆ.

ಸಿಮ್ರಾನ್ ರೇಷ್ಮಾ ರವರ ಪ್ರಕಾರ, ಹಲ್ಲೆಗೊಳಗಾದಾಗ ಬಟ್ಟೆ ಹರಿದಿದ್ದು, ಸಾರ್ವಜನಿಕ ಸ್ಥಳದಲ್ಲೇ ತೀವ್ರ ಅವಮಾನ ಅನುಭವಿಸಿದ್ದಾರೆ. ಇದೇ ವೇಳೆ ಆರೋಪಿಗಳು, “ನೀವು ಯಾರಾದರೂ ಬಳಿ ದೂರು ನೀಡಿದರೆ ಕೊಂದು ಹಾಕುತ್ತೇವೆ” ಎಂದು ಜೀವ ಬೆದರಿಕೆ ಹಾಕಿದ್ದಾರೆ.

ಈ ಘಟನೆಯಿಂದಾಗಿ ತಾಯಿ–ಮಗಳು ಇಬ್ಬರೂ ಪ್ರಸ್ತುತ ಯಲಹಂಕದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಸಿಮ್ರಾನ್ ರ ತಾಯಿ ಹಾಗೂ ಮತ್ತೊಬ್ಬರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Related posts