ಸುದ್ದಿ 

ಮಗನೊಂದಿಗೆ ಜಗಳದ ಬಳಿಕ ಕಾಣೆಯಾದ ಘಟನೆ – ತಾಯಿ, ತಂದೆ ಪೊಲೀಸ್ ಠಾಣೆಗೆ ದೂರು

Taluknewsmedia.com

ಬೆಂಗಳೂರು, ಜುಲೈ 4 2025:


ನಗರದ ನಿವಾಸಿಯೊಬ್ಬರು ತಮ್ಮ ಮಗನ ಗೊಂದಲದ ನಂತರ ಆತ ಮನೆಬಿಟ್ಟು ಹೋಗಿದ್ದು, ಇದುವರೆಗೆ ವಾಪಸ್ಸು ಬರದೆ ಕಾಣೆಯಾಗಿರುವುದಾಗಿ ದೂರು ನೀಡಿದ್ದಾರೆ.

ಜಯಸ್ವಾಮಿ ಪೊಲೀಸ್ ಠಾಣೆಗೆ ಬಂದು ನೀಡಿದ ದೂರಿನ ಪ್ರಕಾರ, ಅವರು ತಮ್ಮ ಹೆಂಡತಿ ಕನ್ಯಾಕುಮಾರಿ ಅವರೊಂದಿಗೆ ಮನೆಯಲ್ಲಿದ್ದರು. ದಿನಾಂಕ 29/06/2025 ರಂದು ಬೆಳಿಗ್ಗೆ ಸುಮಾರು 08:30ರ ಸುಮಾರಿಗೆ, ಮನೆ ಕೆಲಸದ ವಿಷಯವಾಗಿ ಅವರ ಮತ್ತು ಮಗನ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಯಿತು. ಜಗಳದ ನಂತರ ಮಗನು ಕೋಪಗೊಂಡು ತನ್ನ ಮೊಬೈಲ್‌ಫೋನ್‌ನ್ನು ಸಹ ಮನೆದಲ್ಲೇ ಬಿಟ್ಟು ಹೋಗಿದ್ದಾನೆ.

ಜಯಸ್ವಾಮಿ ಅವರು ತಮ್ಮ ರಾತ್ರಿ ಪಾಳಿಯ ಕೆಲಸಕ್ಕೆ ತೆರಳಿದ ನಂತರ, ಮನೆಗೆ ಬಂದು ಅವರ ಮಗಳು ಮತ್ತು ಅಳಿಯರು ಹುಡುಕಾಟ ನಡೆಸಿದರೂ ಮಗನ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಯಾವುದೇ ಮಾಹಿತಿ ಸಿಗದೆ ತೀವ್ರ ಆತಂಕಕ್ಕೊಳಗಾದ ಕುಟುಂಬದವರು ಇದೀಗ ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಹುಡುಗನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರು ಯಾರಿಗಾದರೂ ಈ ಹುಡುಗನ ಬಗ್ಗೆ ಮಾಹಿತಿ ಇದ್ದಲ್ಲಿ ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

Related posts