ಸುದ್ದಿ 

ಆನ್‌ಲೈನ್‌ ಮೋಸ: ಖಾಸಗಿ ವೀಡಿಯೊ ಮೂಲಕ ಬೆದರಿಕೆ ಹಾಕಿದ ಆರೋಪ

Taluknewsmedia.com

ಬೆಂಗಳೂರು, ಜುಲೈ 5 2025


ಆಧುನಿಕ ತಂತ್ರಜ್ಞಾನ ಮತ್ತು ಆನ್‌ಲೈನ್ ಅಪ್‌ಗಳನ್ನು ದುರುಪಯೋಗ ಪಡಿಸಿಕೊಂಡು ನಿರಪರಾಧಿಯೊಬ್ಬನಿಗೆ ಭೀತಿಗೊಳಿಸಿ ಹಣ ಎತ್ತಿದ ಘಟನೆ ಬೆಳಕಿಗೆ ಬಂದಿದೆ. “FRND” ಎಂಬ ಆಪ್‌ನಲ್ಲಿ ಪರಿಚಯವಾದ ಅಪರಿಚಿತ ಯುವತಿಯೋರ್ವಳಿಂದ ಬೆದರಿಕೆ ಸಿಕ್ಕ ನಂತರ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿದೆ.

ವಿನಯ್ ರಾಜ್ ಎಂ ವಿ ಅವರು ನೀಡಿದ ದೂರಿನ ಪ್ರಕಾರ, ಅವರು FRND ಆಪ್‌ ಬಳಸಿ ಆಪರಿಚಿತ ಯುವತಿಯೊಂದಿಗೆ ಚಾಟ್ ಮಾಡುತ್ತಿದ್ದ ಸಂದರ್ಭದಲ್ಲಿ, ಇಬ್ಬರೂ ವಾಟ್ಸಾಪ್ ಮೂಲಕ ವೀಡಿಯೋ ಕರೆ ಮಾಡಿದ್ದರು. ಈ ವೇಳೆ ಖಾಸಗಿ ದೃಶ್ಯಗಳು ಶೆರಿಂಗ್ ಆಗಿದ್ದು, ಬಳಿಕ ಯುವತಿಯೋರ್ವಳು ಆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಾದ Instagram ಮತ್ತು YouTube ನಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದಳು.

ಇದರಿಂದ ಆತಂಕಗೊಂಡ ವಿನಯ್ ರಾಜ್ ಎಂ ವಿ ಅವರು ಯುವತಿಗೆ ಹಂತ ಹಂತವಾಗಿ ₹40,551/- ಹಣವನ್ನು ವರ್ಗಾವಣೆ ಮಾಡಿದರು. ಆದರೆ ಹಣ ನೀಡಿದ ನಂತರವೂ ಯುವತಿಯೋರ್ವಳು ಬೆದರಿಕೆ ಮುಂದುವರಿಸಿ ಮತ್ತಷ್ಟು ಹಣಕ್ಕಾಗಿ ಒತ್ತಡ ಹಾಕಿದಳು. ತಕ್ಷಣ ಅವರು 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಗಳು ಸಂಪಿಗೆಹಳ್ಳಿ ಪೋಲಿಸ್ ಇಲಾಖೆಯ ಹೆಸರಿನಲ್ಲಿ ಕರೆಯಿಸಿ, ನಕಲಿ ಡಿಸ್ಪಿ ಚಿತ್ರವನ್ನು ತೋರಿಸಿ ಇನ್ನಷ್ಟು ಬೆದರಿಕೆ ಹಾಕಿದ ಮಾಹಿತಿಯೂ ಇದೆ. ಈ ಘಟನೆ ಜೂನ್ 30ರ ರಾತ್ರಿ 11 ಗಂಟೆಯಿಂದ ಜುಲೈ 1ರ ಬೆಳಿಗ್ಗೆ 2 ಗಂಟೆಯವರೆಗೆ ನಡೆದಿದ್ದು, ಸಂಪಿಗೆಹಳ್ಳಿ ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ

Related posts