ಸುದ್ದಿ 

ಯಲಹಂಕದಲ್ಲಿ ನಿವೃತ್ತ ಸೈನಿಕರ ಆಸ್ತಿಯ ಮೇಲೆ ವಂಚನೆ: ಕುಟುಂಬದ ದೂರಿನ ಮೇಲೆ ತನಿಖೆ ಪ್ರಾರಂಭ

Taluknewsmedia.com

ಬೆಂಗಳೂರು, ಜುಲೈ 6 2025

ಯಲಹಂಕದಲ್ಲಿ ನಿವೃತ್ತ ಭಾರತೀಯ ಸೇನಾ ಯೋಧನಿಗೆ ಸರ್ಕಾರದಿಂದ ಮಂಜೂರಾದ ನಿವೇಶನವನ್ನು ಸುಳ್ಳು ದಾಖಲೆಗಳ ಆಧಾರದಲ್ಲಿ ವಂಚನೆ ಮೂಲಕ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ನಿವೃತ್ತ ಯೋಧ ರಾಮಯ್ಯ ಅವರ ಪುತ್ರಿ ರಾಮಮ್ಮಣಿ ಕೆ.ಆರ್ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದಲ್ಲಿ ತನಿಖೆ ಆರಂಭವಾಗಿದೆ.ದೂರಿನ ಪ್ರಕಾರ, ರಾಮಯ್ಯ ಅವರು ಭಾರತೀಯ ಸೇನೆಯಿಂದ ನಿವೃತ್ತರಾದ ನಂತರ ಸರ್ಕಾರವು ಅವರನ್ನು ಗೌರವಿಸಿ ಯಲಹಂಕದ ಸರ್ವೆ ನಂ. 24 ರಲ್ಲಿ ಇರುವ ನಿವೇಶನ ಸಂಖ್ಯೆ 136 ಅನ್ನು ಉಚಿತವಾಗಿ ನೀಡಿತ್ತು. ಅವರು ಈ ಆಸ್ತಿಯಲ್ಲಿ 20×30 ಅಡಿ ಗಾತ್ರದ ಮನೆ ಕಟ್ಟಿಸಿಕೊಂಡು ಕುಟುಂಬದೊಂದಿಗೆ ವಾಸವಿದ್ದರು. ರಾಮಯ್ಯ ಅವರ ಮೊದಲ ಪತ್ನಿಯಾದ ಚನ್ನಕೃಷ್ಣಮ್ಮ ಅವರಿಂದ ನಾಲ್ಕು ಮಕ್ಕಳಿದ್ದು, ಇಬ್ಬರು ಈಗ ಲೆಟ್ ಆಗಿದ್ದಾರೆ. ಎರಡನೇ ಪತ್ನಿ ರುಕ್ಮಿಣಮ್ಮ ಅವರು ಮಕ್ಕಳಿಲ್ಲದೆ ನಿಧನರಾದರು.ಅವರ ಮಗಳಾದ ವಿಜಯಲಕ್ಷ್ಮಿ ಅವರು 2007ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಿಬ್ಬರು ಗಂಡು ಮಕ್ಕಳು ಇತ್ತಿದ್ದರು. ಇದರಲ್ಲಿ ಒಬ್ಬರಾದ ಆರುಣ್ ಕುಮಾರ್ ಅವರು ಈಗ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ.ಆಸ್ತಿಯ ಮೇಲೆ ಅಕ್ರಮ ಹಕ್ಕು ಹಚ್ಚಿದ ಆರೋಪಇತ್ತೀಚೆಗೆ, ಪುರುಷೋತ್ತಮ ಎಂಬಾತನು ಈ ನಿವೇಶನದ ಮೇಲೆ ತಮ್ಮ ಹೆಸರು ಬರೆದು “136/24” ಎಂದು ಬರೆದಿರುವುದನ್ನು ನೆರೆಹೊರೆಯವರು ಗಮನಿಸಿ ರಮಾಮಣಿ ಕೆ ಆರ್ ಗಮನಕ್ಕೆ ತಂದರು. ತನಿಖೆ ನಡೆಸಿದಾಗ, ಈ ಆಸ್ತಿಗೆ ಸಂಬಂಧಪಟ್ಟಾಗಿ ಪುರುಷೋತ್ತಮ ಅವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ದಿನಾಂಕ 09/11/2023 ರಂದು ಅಭಿಷೇಕ್ ನರಸಿಂಹಮೂರ್ತಿ ಎಂಬುವವರಿಗೆ ಸೇಲ್ ಡೀಡ್ ಮೂಲಕ ಮಾರಾಟ ಮಾಡಿರುವುದು ಬಹಿರಂಗವಾಯಿತು.ರಮಾಮಣಿ ಕೆ ಆರ್ ಅವರ ಪ್ರಕಾರ, ಪುರುಷೋತ್ತಮ ಅವರ ಕುಟುಂಬದ ವಾರಸುದಾರರಲ್ಲದೆ, ರಕ್ತ ಸಂಬಂಧವೂ ಇಲ್ಲ. ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿಯ ಮೇಲೆ ಅಕ್ರಮವಾಗಿ ಹಕ್ಕು ಹೊಂದಿ ಮಾರಾಟ ಮಾಡಿದ್ದಾರೆ.ಈ ಆಸ್ತಿಗೆ ಸಂಬಂಧಪಟ್ಟ ಮೂಲ ದಾಖಲೆಗಳು ರಾಮಮ್ಮಣಿ ಅವರ ಬಳಿ ಇವೆ. ಅವರು ಈ ಆಸ್ತಿಯ ಕಂದಾಯವನ್ನು ಸಹ ಪಾವತಿಸುತ್ತಿದ್ದಾರೆ. ಇವುಗಳ

Related posts