ಸುದ್ದಿ 

ಬೆಂಗಳೂರು ಅಮೃತಹಳ್ಳಿಯಿಂದ 19 ವರ್ಷದ ಯುವತಿ ಕಾಣೆ – ಕುಟುಂಬದವರು ಕಳವಳದಲ್ಲಿ

Taluknewsmedia.com

ಬೆಂಗಳೂರು, ಜುಲೈ 6 2025:


ನಗರದ ಅಮೃತಹಳ್ಳಿ ಹೊರವಲಯದ ನಿವಾಸಿ ಪಾವನಿ ಕೆ.ಎನ್. ಎಂಬ 19 ವರ್ಷದ ಯುವತಿ ಕಳೆದ ಜುಲೈ 4 ರಂದು ಬೆಳಿಗ್ಗೆ ಮನೆಯಿಂದ ಹೊರಡಿದ ಬಳಿಕ ಮರಳದೇ ಕಾಣೆಯಾಗಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಯುವತಿಯ ತಂದೆ ನಾಗಮೂರ್ತಿ ಅವರು ಸ್ಥಳೀಯ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾಗಮೂರ್ತಿ ಅವರ ದೂರಿನ ಪ್ರಕಾರ, ಪಾವನಿ ಕೆ.ಎನ್. ಅವರು ಜುಲೈ 4 ರಂದು ಬೆಳಿಗ್ಗೆ ಸುಮಾರು 11:00 ಗಂಟೆಗೆ “ಹೊರಗೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಅಷ್ಟರಲ್ಲಿ ಸಂಜೆವಾಯಿತು, ತಾಯಂದಿರು, ಕುಟುಂಬದವರು ನಿರೀಕ್ಷಿಸಿ ಕಾಯುತ್ತಿದ್ದರೂ ಆಕೆ ಮನೆಗೆ ಮರಳಲಿಲ್ಲ. ಎಲ್ಲಾ ಸನ್ನಿಹಿತಸ್ಥಳಗಳಲ್ಲಿ ಹುಡುಕಿದರೂ ಯುವತಿಯ ಬಗ್ಗೆ ಯಾವುದೇ ಮಾಹಿತಿ ಸಿಗದೆ ಇದ್ದ ಕಾರಣ, ಪೋಷಕರು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.

ಕಾಣೆಯಾದ ಯುವತಿಯ ವಿವರಗಳು:
ಹೆಸರು: ಪಾವನಿ ಕೆ.ಎನ್.
ವಯಸ್ಸು: 19 ವರ್ಷ
ಎತ್ತರ: ಸುಮಾರು 4.5 ಅಡಿ
ಬಣ್ಣ: ಗೋಧಿ ಮೈಬಣ್ಣ
ಮುಖದ ಆಕೃತಿ: ಕೋಲುಮುಖ
ಕೂದಲು: ಕಪ್ಪು ಕೂದಲು
ವಿಶೇಷ ಗುರುತು: ಯಾವುದೇ ಗುರುತು ಇಲ್ಲ
ಧರಿಸಿಕೊಂಡಿದ್ದ ಬಟ್ಟೆ: ಬಿಳಿ ಬಣ್ಣದ ಟಿ-ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್
ಭಾಷಾ ಜ್ಞಾನ: ಕನ್ನಡ, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡಬಲ್ಲಳು

ಯುವತಿಯ ಪತ್ತೆಗಾಗಿ ಪೊಲೀಸರು ಮುಂದಾಗಿದ್ದು, ಸಾರ್ವಜನಿಕರಿಂದ ಸಹಾಯ ಕೋರಲಾಗಿದೆ. ಯುವತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ, ನಿಕಟದ ಪೊಲೀಸ್ ಠಾಣೆಯೊಂದಿಗೆ ಸಂಪರ್ಕಿಸಲು ಮನವಿ ಮಾಡಲಾಗಿದೆ.

Related posts