ಸುದ್ದಿ 

ನಕಲಿ ಬ್ರಾಂಡ್ ಬಟ್ಟೆ ಮಾರಾಟ – ಕಂಪನಿಯಿಂದ ಕಾನೂನು ದೂರು

Taluknewsmedia.com

ಬೆಂಗಳೂರು, ಜುಲೈ7,2025: ಪ್ರಸಿದ್ಧ ಫ್ಯಾಷನ್ ಬ್ರಾಂಡ್‌ಗಳಾದ ‘ಇಂಡಿಯನ್ ಗ್ಯಾರೇಜ್’ ಮತ್ತು ‘ಹಾರ್ಡ್ ಸೋಡಾ’ ಹೆಸರಿನಲ್ಲಿ ನಕಲಿ ಬಟ್ಟೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಅಂಗಡಿಯ ವಿರುದ್ಧ ಬೆಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಶ್ರೀ ಸುರೇಶ್ ಕುಮಾರ್ ಅವರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿರುವುದಂತೆ, ಅವರು ಬೆಂಗಳೂರಿನ ಸ್ಟೈಲ್ರ್ಸ್ ಲೈಫ್‌ಸ್ಟೈಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಚೀಫ್ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕಂಪನಿಗೆ ‘ಇಂಡಿಯನ್ ಗ್ಯಾರೇಜ್’ ಮತ್ತು ‘ಹಾರ್ಡ್ ಸೋಡಾ’ ಎಂಬ ಬಟ್ಟೆ ಬ್ರಾಂಡ್‌ಗಳ ಮಾಲೀಕತ್ವವಿದೆ.

ದಿನಾಂಕ 24/06/2025 ರಂದು, ಸಂಜಯನಗರ ಮುಖ್ಯರಸ್ತೆಯಲ್ಲಿರುವ ಅರುಣ್ ಅಡ್ಡ ಎಂಬ ಬಟ್ಟೆ ಅಂಗಡಿಯಲ್ಲಿ ಕಂಪನಿಯ ಬ್ರಾಂಡ್ ಹೆಸರುಗಳನ್ನು ನಕಲು ಮಾಡಿ ಬಟ್ಟೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಅವರಿಗೆ ಲಭಿಸಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಕಂಪನಿಯಿಂದ ಅಧಿಕೃತ ನಿರ್ದೇಶನ ನೀಡಲಾಗಿತ್ತು.

ದಿನಾಂಕ 25/06/2025 ರಂದು ಮಧ್ಯಾಹ್ನ ಸುಮಾರು 12:30ರ ಸುಮಾರಿಗೆ ಅಂಗಡಿಗೆ ಭೇಟಿ ನೀಡಿದ ಸುರೇಶ್ ಕುಮಾರ್ ಅವರು, ಅಂಗಡಿಯಿಂದ ಒಂದು ಪ್ಯಾಂಟ್ ಖರೀದಿಸಿದರು. ಪರಿಶೀಲನೆ ವೇಳೆ, ಅದು ನಕಲಿ ಬ್ರಾಂಡ್‌ನದು ಎಂದು ಸ್ಪಷ್ಟವಾಯಿತು. ಪ್ಯಾಂಟ್‌ನಲ್ಲಿ ಕಂಪನಿಯ ಮೂಲ ಲೇಬಲ್ ಮತ್ತು ಬಾರ್ ಕೋಡ್‌ಗಳನ್ನು ನಕಲು ಮಾಡಿ ಬಳಸಲಾಗಿದ್ದುದನ್ನು ಪತ್ತೆ ಹಚ್ಚಲಾಯಿತು.

ಕಾನೂನು ಬಾಹಿರವಾಗಿ ನಕಲಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದ್ದು, ಇದರ ಮೂಲಕ ಕಂಪನಿಗೆ ಆರ್ಥಿಕ ನಷ್ಟ ಮತ್ತು ಬ್ರಾಂಡ್ ಖ್ಯಾತಿಗೆ ಹಾನಿಯುಂಟಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಂಬಂಧಪಟ್ಟ ಅಂಗಡಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲೆ ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ. ಶೀಘ್ರದಲ್ಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.

Related posts