ಸುದ್ದಿ 

ಶ್ರೀಶೈಲ ಹೋಟೆಲ್‌ ಬುಕಿಂಗ್ ನೆಪದಲ್ಲಿ 77,600 ರೂ. ಮೋಸ – ಬೆಂಗಳೂರಿನಲ್ಲಿ ವ್ಯಕ್ತಿಯಿಂದ ದೂರು

Taluknewsmedia.com

ಬೆಂಗಳೂರು, 7 ಮೇ 2025: ನಗರ ನಿವಾಸಿಯೊಬ್ಬರು ಶ್ರೀಶೈಲದ ಹೋಟೆಲ್‌ನಲ್ಲಿ ರೂಮ್ ಬುಕಿಂಗ್ ಮಾಡುವ ನೆಪದಲ್ಲಿ 77,600 ರೂಪಾಯಿ ಮೊತ್ತವನ್ನು ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂಜಯನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀ ರಮೇಶ್ ಅವರು ತಮ್ಮ ಆಕ್ಸಿಸ್ ಬ್ಯಾಂಕ್ ಖಾತೆ (ಖಾತೆ ಸಂಖ್ಯೆ: 914010057499191) ಬಳಸಿ, ದಿನಾಂಕ: 22.05.2025 ರಂದು ಆಂಧ್ರ ಪ್ರದೇಶದ ಶ್ರೀಶೈಲಾ ದೇವಸ್ಥಾನದ ಬಳಿಯ ಹರಿತಾ ಹೋಟೆಲ್ ಅಂಡ್ ರೆಸಾರ್ಟ್‌ನಲ್ಲಿ ರೂಮ್‌ ಬುಕಿಂಗ್ ಮಾಡಲು ಪ್ರಯತ್ನಿಸಿದರು.

ಹೋಟೆಲ್ ಸಿಬ್ಬಂದಿಯಾಗಿ ಪರಿಚಯಿಸಿಕೊಂಡ ವ್ಯಕ್ತಿಗಳು ಫೋನ್‌ಪೇ ಮೂಲಕ ಪಾವತಿ ಮಾಡಲು ಆಗ್ರಹಿಸಿದ್ದು, ನಂಬಿದ ರಮೇಶ್ ಅವರು ಹಂತ ಹಂತವಾಗಿ ಒಟ್ಟು ₹77,600 ಹಣವನ್ನು ವರ್ಗಾಯಿಸಿದರು. ಆದರೆ ನಂತರ ಯಾವುದೇ ರೂಮ್‌ ಕಾನ್ಫರ್ಮೇಶನ್ ದೊರಕದೇ ಹೋದಿದ್ದು, ಹೋಟೆಲ್ ಸಂಪರ್ಕಕ್ಕೂ ಸಿಗದೆ ಮೋಸವಾಗಿ ಹೋಗಿದ್ದಾರೆ ಎಂದು ಪಿರ್ಯಾದಿಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಹಣ ಪಡೆದ ಖಾತೆಗಳ ಹಾಗೂ ಕರೆ ಮಾಡಿದ ದೂರವಾಣಿ ಸಂಖ್ಯೆಗಳ ಪತ್ತೆಹಚ್ಚುವ ಕಾರ್ಯ ಸೈಬರ್ ವಿಭಾಗದ ನೆರವಿನಿಂದ ನಡೆಯುತ್ತಿದೆ.

Related posts