ಸುದ್ದಿ 

ಯುವತಿ ನಾಪತ್ತೆ: ಸ್ನೇಹಿತನ ಸಂದೇಶದ ನಂತರ ಮನೆಯಿಂದ ಹೊರಟು ಮರಳದೆ ಆಕೆ ಕಣ್ಮರೆಯಾಗಿದ್ದಾರೆ

Taluknewsmedia.com

ಬೆಂಗಳೂರು, ಜುಲೈ 7 2025


ಬೆಂಗಳೂರು ನಗರದ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ನಡೆದಿದೆ. ಡಿಪ್ಲೋಮಾ ವಿದ್ಯಾಭ್ಯಾಸ ಮಾಡಿದ ನಂತರ ಯಾವುದೇ ಉದ್ಯೋಗವಿಲ್ಲದೆ ತಮ್ಮನೊಂದಿಗೆ ವಾಸಿಸುತ್ತಿದ್ದ ಆಕೆ, ಸ್ನೇಹಿತನ ಸಂದೇಶದ ನಂತರ ಮನೆಬಿಟ್ಟು ಹೋಗಿ ಮರುಬಾರಿಯಾಗಿಲ್ಲ.

ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಯುವತಿಗೆ ತನ್ನ ಸ್ನೇಹಿತನಿಂದ “ನಿಮಗೆ ಇಲ್ಲದೇ ಇದ್ದರೆ ಬನ್ನಿ” ಎಂಬ ಸಂದೇಶ ಬಂದಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆಕೆ 02/07/2025 ರಂದು ರಾತ್ರಿ ಸುಮಾರು 12:30ಕ್ಕೆ ಮನೆಬಿಟ್ಟು ಹೊರಟು ಹೋಗಿದ್ದಾಳೆ. ನಂತರ ಯುವತಿ ಎಲ್ಲಿ ಹೋಗಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಮೊಬೈಲ್ ಫೋನ್ ಕೂಡ ಆಫ್ ಆಗಿರುವುದರಿಂದ ಸಂಪರ್ಕ ಸಾಧ್ಯವಾಗಿಲ್ಲ.

ತಮ್ಮ ಮಗಳ ನಾಪತ್ತೆಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಕುಟುಂಬಸ್ಥರು, ಆಕೆಯನ್ನು ಹುಡುಕುವಲ್ಲಿ ಸಾರ್ವಜನಿಕರಿಂದ ಸಹಕಾರ ಕೋರಿ, ಅಮೃತಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಾಥಮಿಕ ದೂರು ದಾಖಲಿಸಿದ್ದಾರೆ. ಯುವತಿಯ ಸ್ನೇಹಿತನ ಮೇಲೂ ಶಂಕೆ ವ್ಯಕ್ತಪಡಿಸಿರುವ ಕುಟುಂಬಸ್ಥರ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಮೃತಹಳ್ಳಿ ಠಾಣೆಯ ಎ.ಎಸ್.ಐ ಚನ್ನಪ್ಪ ಜೇ. ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, “ಯುವತಿಯ ಸಂಪರ್ಕದಲ್ಲಿದ್ದ ಎಲ್ಲ ವ್ಯಕ್ತಿಗಳಿಂದ ವಿಚಾರಣೆ ನಡೆಸಲಾಗುತ್ತಿದೆ. ಹುಡುಕಾಟ ಪ್ರಗತಿಯಲ್ಲಿ ಇದೆ” ಎಂದಿದ್ದಾರೆ.
ಯುವತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ, ಆಮೃತಹಳ್ಳಿ ಪೊಲೀಸ್ ಠಾಣೆಯನ್ನು ತಕ್ಷಣ ಸಂಪರ್ಕಿಸಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Related posts