ಸುದ್ದಿ 

ಸುರಕ್ಷತಾ ಸಾಧನಗಳಿಲ್ಲದೆ ಪೇಂಟಿಂಗ್ ಕೆಲಸ – ಕಾರ್ಮಿಕನ ದುರ್ಘಟನೆದಲ್ಲಿ ಮರಣ

Taluknewsmedia.com

ಬೆಂಗಳೂರು, ಜುಲೈ 7 2025
ಹೆಬ್ಬಾಳದಲ್ಲಿ ನಡೆದ ದುರ್ಘಟನೆಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಇಮಾಮುಲ್ (28) ಎಂಬ ಕಾರ್ಮಿಕನು ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿದ್ದಾರೆ.

ಇಮಾಮುಲ್ ಅವರು ಕಂಟ್ರಾಕ್ಟರ್ ಮಂಜುನಾಥ್ ಮತ್ತು ಇಂಜಿನಿಯರ್ ನವೀನ್ ಅವರ ಬಳಿ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಜುಲೈ 5ರಂದು ಮಧ್ಯಾಹ್ನ 3:30ರ ಸಮಯದಲ್ಲಿ ಅವರು ಸುರಕ್ಷತಾ ಉಪಕರಣಗಳಿಲ್ಲದೆ ಎತ್ತರದ ಮೇಲೆ ಕೆಲಸ ಮಾಡುತ್ತಿದ್ದರು. ಈ ವೇಳೆ ಅಜಾಗರೂಕತೆಯಿಂದ ಅವರು ಬಿದ್ದು ತೀವ್ರ ಗಾಯಗೊಂಡರು.

ಅವರನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕುಟುಂಬಸ್ಥರು ಈ ಘಟನೆಗೆ ಪೂರಕ ಸುರಕ್ಷತಾ ಸಾಧನಗಳನ್ನು ಒದಗಿಸದ ಕೆಲಸದವರೇ ಕಾರಣವೆಂದು ಆರೋಪಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಮೃತಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Related posts