ಮನೆ ಮಾಲೀಕರಿಂದ ಬಾಡಿಗೆದಾರರಿಗೆ ಕಿರುಕುಳ: ಪೊಲೀಸ್ ಠಾಣೆಗೆ ದೂರು
ಬೆಂಗಳೂರು, ಜುಲೈ 7:2025
ನಗರದ ಒಂದು ನಿವಾಸದಲ್ಲಿ ನೆಲಮಹಡಿಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿರುವ ವ್ಯಕ್ತಿಯೊಬ್ಬರು, ಮನೆಯ ಮಾಲೀಕರಿಂದ ನಿರಂತರವಾಗಿ ಮಾನಸಿಕ ಕಿರುಕುಳಕ್ಕೆ ಒಳಗಾಗಿರುವ ಬಗ್ಗೆ ಯಲಹಂಕ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗೌತಮ್ ಅವರು ತಮ್ಮ ದೂರಿನಲ್ಲಿ ತಿಳಿಸಿದಂತೆ, ಅವರು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಬಾಡಿಗೆ ಪಾವತಿಸುತ್ತಾ, ನೀರು ಮತ್ತು ವಿದ್ಯುತ್ ಬಿಲ್ ಕೂಡ ನಿಯಮಿತವಾಗಿ ಪೂರೈಸುತ್ತಿದ್ದಾರೆ. ಆದರೂ ಮನೆಯ ಮಾಲೀಕರಾದ ಡಿ. ನರಸಿಂಹಯ್ಯ ಅವರು ವೈಯಕ್ತಿಕ ವಿಷಯಗಳ ಬಗ್ಗೆ ಮಾತು ಕೊಡುತ್ತಾ, ಅವಮಾನಕಾರಿ ಶಬ್ದಗಳಿಂದ ನಿಂದಿಸುತ್ತಿರುವುದಾಗಿ ಆರೋಪಿಸಲಾಗಿದೆ.
ಬಾಡಿಗೆದಾರರು ಅನೇಕ ಬಾರಿ ಶಾಂತಿಯುತವಾಗಿ ಮನವಿ ಮಾಡಿದರೂ, ಮಾಲೀಕರು ಯಾವುದೇ ರೀತಿಯ ಸ್ಪಂದನೆ ನೀಡದೆ, ನೀರಿನ ಸಂಪರ್ಕವನ್ನು ಕಡಿತಗೊಳಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರಂತೆ. ಈ ಎಲ್ಲಾ ಘಟನೆಗಳಿಂದಾಗಿ ದೂರುದಾರರು ಆರೋಗ್ಯ ಸಮಸ್ಯೆಗೂ ಒಳಗಾಗಿರುವುದಾಗಿ ತಿಳಿದು ಬಂದಿದೆ.
ಈ ಸಂಬಂಧ ದೂರು ಪಡೆದುಕೊಂಡ ಅಮೃತಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

