ಸುದ್ದಿ 

ಕೆಲಸದ ನೆಪದಲ್ಲಿ 10 ಲಕ್ಷ ರೂ. ವಂಚನೆ – ಮೂವರಿಗೆ ವಿರುದ್ಧ ದೂರು

Taluknewsmedia.com

ಬೆಂಗಳೂರು, ಜುಲೈ 8 2025


ಮಗಳನ್ನು ಎರ್‌ಫೋರ್ಸ್‌ನಲ್ಲಿ ಉದ್ಯೋಗಕ್ಕೆ ಸೇರಿಸುತ್ತೇವೆ ಎಂದು ನಂಬಿಸಿ, ಹಂತ ಹಂತವಾಗಿ 10 ಲಕ್ಷ ರೂಪಾಯಿ ವಂಚಿಸಿದ ಆರೋಪದಲ್ಲಿ ವೀರ, ಸೆಲ್ಲ ಹಾಗೂ ಮಂಜುಳಾ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿ ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ತಾವು ಟೈಲ್ ವಾಷಿಂಗ್ ಕೆಲಸ ಮಾಡಿಕೊಂಡಿದ್ದು, ಕುಟುಂಬದ ಬದುಕಿಗಾಗಿ ಕಷ್ಟಪಟ್ಟು ದುಡಿಯುತ್ತಿದ್ದೆನೆಂದು ದೂರಿನಲ್ಲಿ ತಿಳಿಸಿದ್ದಾರೆ. 2019ರಲ್ಲಿ ಆಪಾದಿತರು, ಮಗಳಿಗೆ ಉದ್ಯೋಗ ಕೊಡಿಸಿಕೊಡುತ್ತೇವೆ ಎಂದು ಹೇಳಿ, ಮೊದಲು ನಗದು ರೂಪದಲ್ಲಿ ₹3.5 ಲಕ್ಷ ಮತ್ತು ನಂತರ ಆನ್‌ಲೈನ್ ಮೂಲಕ ₹6.5 ಲಕ್ಷ ಸೇರಿದಂತೆ ಒಟ್ಟು ₹10 ಲಕ್ಷ ಪಡೆದಿದ್ದಾರೆ.

ಆದರೂ, ಉದ್ಯೋಗ ಕೊಡಿಸದೇ, ಹಣವನ್ನೂ ಹಿಂದಿರುಗಿಸದೇ, ಕೇಳಲು ಹೋದಾಗ ದುರ್ವ್ಯವಹಾರ ಮಾಡಿದ್ದು, ಗಾಲಿ ಬೈದು, ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ಇದುವರೆಗೆ ಕೇವಲ ₹1.45 ಲಕ್ಷ ಮಾತ್ರ ಹಿಂದಿರುಗಿಸಲಾಗಿದೆ ಎಂದು ಅವರು ದೂರಿದ್ದಾರೆ.

ಈ ಕುರಿತು ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related posts