ಸಿಮ್ ದುರಸ್ತಿ ಬಳಿಕ ಖಾತೆಯಿಂದ ₹2.96 ಲಕ್ಷ ಕಳವು
ಬೆಂಗಳೂರು:8 2025
ನಗರದ ನಿವಾಸಿಯೊಬ್ಬರು ತಮ್ಮ ಮೊಬೈಲ್ ಸಿಮ್ ದುರಸ್ತಿ ಮಾಡಿದ ನಂತರ, ಅವರ ಬ್ಯಾಂಕ್ ಖಾತೆಯಿಂದ ₹2.96 ಲಕ್ಷ ಕಳವಾಗಿರುವ ಘಟನೆ ನಡೆದಿದೆ.
ಮಂಜುನಾಥ್ ಅವರು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಸಿಮ್ ನಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದ ಕಾರಣ ಅವರು ಮೊಬೈಲ್ ಸ್ಟೋರ್ ಗೆ ಹೋಗಿ ಸಿಮ್ ಕಾರ್ಡ್ ಸರಿಪಡಿಸಿಕೊಂಡರು. ಆದರೆ ಅದರ ನಂತರ ಮೊಬೈಲ್‌ಗೆ ₹6,000 ಡೆಬಿಟ್ ಆದ ಸಂದೇಶ ಬಂದಿದೆ. ತಕ್ಷಣ ಅವರು ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ, ಅವರ ಖಾತೆಯಿಂದ ಒಟ್ಟು ₹2,96,981 ರೂ. ಹಣ ಕಟ್ ಆಗಿರುವುದು ತಿಳಿದುಬಂದಿತು.
ಈ ಸಂಬಂಧ ಅಪರಿಚಿತ ವ್ಯಕ್ತಿಗಳು ಹಣ ವಂಚನೆ ಮಾಡಿದ್ದಾಗಿ ಶಂಕಿಸಿ ಅವರು ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

