ಸುದ್ದಿ 

ವಿದೇಶಿ ಪ್ರಜೆಗಳಿಂದ 4.5 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ವಶ: ರಾಜಾನುಕುಂಟೆ ಪೊಲೀಸರ ಬೃಹತ್ ದಾಳಿ

Taluknewsmedia.com

ಬೆಂಗಳೂರು: 8 2025


ರಾಜಾನುಕುಂಟೆ ಪೊಲೀಸ್ ಠಾಣೆಯ ವ್ಯಾಪ್ತಿಯ ಅದ್ರಿಗಾನಹಳ್ಳಿ ಗ್ರಾಮದಲ್ಲಿ ಬಾಡಿಗೆಗೆ ವಾಸವಿದ್ದ ಇಬ್ಬರು ನೈಜೀರಿಯಾದ ಪ್ರಜೆಗಳ ಮೇಲೆ ಪೊಲೀಸರ ಬೃಹತ್ ದಾಳಿ ನಡೆಯಿದ್ದು, ಸುಮಾರು 4.5 ಕೋಟಿ ರೂಪಾಯಿ ಮೌಲ್ಯದ Methamphetamine (MDMA Crystals) ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜುಲೈ 6, 2025 ರಂದು ಮಧ್ಯಾಹ್ನ 3.30ರ ಸಮಯದಲ್ಲಿ ಈ ಸಂಬಂಧ ಖಚಿತ ಮಾಹಿತಿ ದೊರೆಯುತ್ತಿದ್ದಂತೆ, ರಾಜಾನುಕುಂಟೆ ಪೊಲೀಸ್ ಇನ್ಸ್‌ಪೆಕ್ಟರ್ ಅವರ ನಿರ್ದೇಶನದಂತೆ ಪಿಸಿ 1267 ಗಿರೀಶ್ ಸ್ಥಳಕ್ಕೆ ತೆರಳಿ ಮಾಹಿತಿ ದೃಢಪಡಿಸಿದರು. ನಂತರ ದೊಡ್ಡಬಳ್ಳಾಪುರ ಉಪವಿಭಾಗದ ಡಿಎಸ್‌ಪಿ ಅವರ ಅನುಮತಿಯಿಂದ ಶೋಧನಾ ವಾರೆಂಟ್ ಪಡೆದು, ಸಂಜೆ 4.30ಕ್ಕೆ ಇಬ್ಬರು ಪಂಚಾಯತ್ ಸಾಕ್ಷಿಗಳೊಂದಿಗೆ ಶೋಧನೆ ಕೈಗೊಳ್ಳಲಾಯಿತು.

ಶೋಧನೆಯ ವೇಳೆ ಪತ್ತೆಯಾದ ಮಾದಕ ವಸ್ತುಗಳು:

2,820 ಗ್ರಾಂ Methamphetamine Crystals (MDMA)

200 ಗ್ರಾಂ ಒಣಗಿದ ಹೈಡ್ರೋ ಗಾಂಜಾ

₹2,06,870 ನಗದು

2 ತೂಕ ತೀರಕ ಯಂತ್ರಗಳು

ವಿವಿಧ ಕಂಪನಿಗಳ ಸಿಮ್ ಕಾರ್ಡ್‌ಗಳು ಮತ್ತು ಇತರ ವಸ್ತುಗಳು

ಬಂಧಿತ ವಿದೇಶಿ ಪ್ರಜೆಗಳು:

  1. ಅಲಸೋನ್ಯೆ ಪೀಟರ್ ಒಬಿಯೋಮಾ, ವಯಸ್ಸು 35, ನೈಜೀರಿಯಾದ ಅಬುಜಾ ನಿವಾಸಿ
  2. ಸಂಡೆ ವಿಸ್ಡಮ್ @ ಜಾನ್ ವಿಕ್ಟರ್ ಆಂಬೋಮೊ, ವಯಸ್ಸು 28, ನೈಜೀರಿಯಾದ ಉಮುಒಕ್ವರಾ ನಿವಾಸಿ

ಈ ಮನೆ ಶೋಧನೆ ಸಂಜೆ 6 ಗಂಟೆಯಿಂದ 8 ಗಂಟೆವರೆಗೆ ನಡೆಯಿದ್ದು, ಈ ವೇಳೆ ಎಲ್ಲಾ ವಸ್ತುಗಳ ಪಟ್ಟಿ ಹಾಗೂ ಪನ್‍ಚನಾಮೆ ಕೈಗೊಳ್ಳಲಾಯಿತು. ಆರೋಪಿಗಳನ್ನು ಬಂಧಿಸಿ ರಾಜಾನುಕುಂಟೆ ಠಾಣೆಗೆ ಕರೆತರಲಾಗಿದೆ.

ಕಾನೂನು ಕ್ರಮ:
ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್‌ 8(ಸಿ), 22(ಸಿ), ಮತ್ತು 20(ಬಿ)(ii)(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಮತ್ತು ಹೆಚ್ಚಿನ ಮಾಹಿತಿ ಬಹುಶಃ ಮುಂದೆ ಬಹಿರಂಗವಾಗುವ ನಿರೀಕ್ಷೆಯಿದೆ.

Related posts