ಸುದ್ದಿ 

ಪಿಯುಸಿ ವಿದ್ಯಾರ್ಥಿನಿ ನಾಪತ್ತೆ: ಹೆಬ್ಬಾಳದಿಂದ ತೆರಳಿದ ನಂತರ ಮನೆಗೆ ವಾಪಸ್ಸು ಇಲ್ಲ

Taluknewsmedia.com

ಬೆಂಗಳೂರು, ಜುಲೈ 8 2025


ನಗರದ ಹೆಬ್ಬಾಳದಲ್ಲಿರುವ ತಮ್ಮ ಮನೆೆಯಿಂದ ಕಾಲೇಜಿಗೆ ತೆರಳಿದ್ದ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಗಾಹ್ನವಿ (17) ಈಕೆಯು ಕೊನೆಯದಾಗಿ ಬೆಳಿಗ್ಗೆ 8.30ಕ್ಕೆ ಮನೆಯಿಂದ ಹೊರಡಿದ್ದು, ಕಾಲೇಜು ಮುಗಿದ ನಂತರ ಮಧ್ಯಾಹ್ನ 2.30ರ ಹೊತ್ತಿಗೆ ಮನೆಗೆ ವಾಪಸ್ಸು ಬಾರದಿರುವುದಾಗಿ ಪೋಷಕರು ತಿಳಿಸಿದ್ದಾರೆ.

ಮೂಲತಃ ರಾಮನಗರದ ಚನ್ನಪಟ್ಟಣದವರಾಗಿರುವ ಗಾಹ್ನವಿಯ ಕುಟುಂಬವು ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ತಾಯಿ ಹೌಸ್ ಕೀಪಿಂಗ್ ಸೂಪರ್ವೈಸರ್ ಹಾಗೂ ತಂದೆ ಸೆಕ್ಯುರಿಟಿ ಗಾರ್ಡ್ ಉದ್ಯೋಗದಲ್ಲಿದ್ದಾರೆ. ಗಾಹ್ನವಿ ತಮ್ಮ ಮಹಾವಿದ್ಯಾಲಯದ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ವಿಚಾರಿಸಿದರೂ ಆಕೆಯ ಬಗ್ಗೆ ಯಾವುದೇ ಮಾಹಿತಿ ದೊರಕದ ಕಾರಣ, ಆತಂಕಗೊಂಡ ಪೋಷಕರು ಈ ವಿಷಯವನ್ನು ಯಲಹಂಕ ಪೋಲಿಸ್ ಠಾಣೆಗೆ ವರದಿ ಮಾಡಿದ್ದಾರೆ.

ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಅನಿತಾ ಕೆಜೆ ದಾಖಲಾಗಿದ್ದು, ಪ್ರಕರಣವನ್ನು ಅಪಹರಣದ ಅಂಶದಲ್ಲೂ ತನಿಖೆ ನಡೆಸಲಾಗುತ್ತಿದೆ. ಸಾರ್ವಜನಿಕರು ಗಾಹ್ನವಿ ಬಗ್ಗೆ ಯಾವುದೇ ಮಾಹಿತಿ ಹೊಂದಿದ್ದರೆ, ಮೊಟ್ಟಮೊದಲು ಸಮೀಪದ ಪೊಲೀಸ್ ಠಾಣೆಗೆ ಸಂಪರ್ಕಿಸಲು ಪೊಲೀಸ್ ಇಲಾಖೆ ವಿನಂತಿಸಿದೆ.

Related posts