10 ಲಕ್ಷ ರೂಪಾಯಿ ವಂಚನೆ ಪ್ರಕರಣ: ಮಲಬಾರ್ ಮಲ್ಟಿ ಸ್ಟೇಟ್ ಸೊಸೈಟಿ ವಿರುದ್ಧ ದೂರು
ಆನೇಕಲ್, ಜುಲೈ 8, 2025:
ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿ, ದೊಮ್ಮಸಂದ್ರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಲಬಾರ್ ಮಲ್ಟಿ ಸ್ಟೇಟ್ ಅಗೋ ಕೋ-ಆಪರೇಟಿವ್ ಸೊಸೈಟಿ ಎಂಬ ಖಾಸಗಿ ಹಣಕಾಸು ಸಂಸ್ಥೆ ವಿರುದ್ಧ, ಸ್ಥಳೀಯ ಮಹಿಳೆಯೊಬ್ಬರು 10 ಲಕ್ಷ ರೂಪಾಯಿ ವಂಚನೆಯ ಆರೋಪವನ್ನು ಮೊಳಹಾಕಿದ್ದಾರೆ.
ಚಂದ್ರರೆಡ್ಡಿ ಅವರ ಪ್ರಕಾರ, ಸರ್ಜಾಪುರ-ಬೆಂಗಳೂರು ಮುಖ್ಯರಸ್ತೆಯ ಕರಿಯಪ್ಪ ಬಿಲ್ಡಿಂಗ್‌ನಲ್ಲಿ ಕಳೆದ 6-7 ವರ್ಷಗಳಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ರಾಹುಲ್ ಚಕ್ರಪಾಣಿ (ಅಧ್ಯಕ್ಷ), ಸುನ್ನಿ ಅಬ್ರಹಾಂ (ಕಾರ್ಯನಿರ್ವಾಹಕ ಅಧಿಕಾರಿಗಳು), ಅಮ್ಮುಲು ಪಿ.ಎಸ್. (ಮ್ಯಾನೇಜರ್), ಹಾಗೂ ರಾಜೇಶ್ ಟಿ.ಸಿ. (ಸಹಾಯಕ) ಅವರು ಜನರಿಂದ ಹಣ ಸಂಗ್ರಹಿಸುತ್ತಿದ್ದರು.
2022 ರಲ್ಲಿ ಸಂಸ್ಥೆಯ ಸಿಬ್ಬಂದಿ ತನ್ನ ಬಳಿ ಬಂದು ಆಕರ್ಷಕ ಮೂಡಣಿಗಳ ಭರವಸೆಯನ್ನು ನೀಡಿದ ಹಿನ್ನೆಲೆಯಲ್ಲಿ, ಚಂದ್ರರೆಡ್ಡಿ ಅವರು ತಮ್ಮ ಎಸ್‌ಬಿಐ ಮತ್ತು ಕರ್ನಾಟಕ ಬ್ಯಾಂಕ್ ಖಾತೆಗಳಿಂದ ಒಟ್ಟು 10 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ದಾರೆ. 6 ವರ್ಷಗಳಲ್ಲಿ ದುಪ್ಪಟ್ಟು ಮೊತ್ತ ನೀಡುವುದಾಗಿ ಹೇಳಿ ಬಾಂಡ್ ಪತ್ರಿಕೆಗಳನ್ನು ಸಹ ನೀಡಿದ್ದಾರೆ.
ಇನ್ನೊಂದು ಕಡೆ, ಚಂದ್ರರೆಡ್ಡಿ ಅವರು 2 ಲಕ್ಷ ರೂ. ನಗದು ಸಹ ನೀಡಿದ್ದು, ಅದನ್ನು ಸಹಾಯಕರಾದ ರಾಜೇಶ್ ಟಿ.ಸಿ. ಅವರು ಬ್ಯಾಂಕ್‌ನಲ್ಲಿ ಜಮಾ ಮಾಡದೇ ದುರುಪಯೋಗ ಪಡಿಸಿದ್ದಾರಂತೆ. ನಂತರ ಹಣ ಕೇಳಿದಾಗ, ನಕಲಿ ಚೆಕ್‌ಗಳನ್ನು ನೀಡಿದರೆಂದು ದೂರಿನಲ್ಲಿ ತಿಳಿಸಿದ್ದಾರೆ.
2023ರ ಜೂನ್ 5ರಂದು ಸಂಸ್ಥೆಯ ಶಾಖೆ ದಿಢೀರ್‌ವಾಗಿ ಮುಚ್ಚಲ್ಪಟ್ಟಿದ್ದು, ನಂತರ ಸಿಬ್ಬಂದಿಯ ಕಡೆಯಿಂದ ಯಾವುದೇ ಸಂಪರ್ಕವಿಲ್ಲದೆ ಕಾಣೆಯಾಗಿದ್ದಾರೆ. 2024ರ ಜನವರಿಯಲ್ಲಿ ನವಾಜ್ ಎಂಬುವರ ಹೊಸ ಅಧ್ಯಕ್ಷರಾಗಿದ್ದು, ಬಳಿಕ ಬಿಜೋಯ್ ಅವರಿಗೆ ಪದವಿ ವರ್ಗಾವಣೆವಾಗಿದೆ. ಇವರು ಮೊದಲು ಹಣ ಹಿಂತಿರುಗಿಸುವ ಭರವಸೆ ನೀಡಿದರೂ, ಈವರೆಗೆ ಯಾವುದೇ ಹಣ ಮರಳಿಸದಿರುವುದಾಗಿ ಚಂದ್ರ ರೆಡ್ಡಿ ಅವರು ಆರೋಪಿಸಿದ್ದಾರೆ.

