ಪ್ರೇಮ, ಮದುವೆ, ನಂತರ ಮೋಸ: ಯುವತಿಯ ದೂರಿನೊಂದಿಗೆ ಪ್ರಕರಣ ದಾಖಲಿಸಿದ ಆನೇಕಲ್ ಪೊಲೀಸರು
ಆನೇಕಲ್, 08ಜುಲೈ 2025:
ಆನೇಕಲ್ ತಾಲ್ಲೂಕಿನ ಮುತ್ತುಗಟ್ಟಿದಿಣ್ಣೆ ಗ್ರಾಮದ ನಿವಾಸಿ ಕಲಾವತಿ ಎಂಬ ಯುವತಿ ಪ್ರೀತಿಸಿ ಮದುವೆಯಾಗಿ ಬಳಿಕ ಹಣ ಮತ್ತು ಮೊಬೈಲ್ ಪಡೆದು ತಾನು ಮೋಸಕ್ಕೆ ಒಳಗಾದಿರುವುದಾಗಿ ಆನೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಪ್ರಾಥಮಿಕ ವರದಿ ಪ್ರಕಾರ, ಕಲಾವತಿ ಅವರಿಗೆ ಸುಮಾರು ಒಂದು ವರ್ಷದಿಂದ ಗೆಡರಟಿಗನಬೆಲೆ ಗ್ರಾಮದ ಸುಪ್ರೀತ್ ಎಂಬಾತನೊಂದಿಗೆ ಪರಿಚಯವಿದ್ದು, ಅವರಲ್ಲಿ ಸಹಾನುಭೂತಿ ತೋರಿಸಿ ಪ್ರೀತಿಗೆ ಇಳಿದು ಜೂನ್ 10, 2025 ರಂದು ಮದುವೆಯಾಗಿದ್ದರು. ನಂತರ, ಕಲಾವತಿಯ ಹತ್ತಿರದಿಂದ ₹1,10,000 ನಗದು ಮತ್ತು ಮೊಬೈಲ್ ಫೋನ್ ಪಡೆದು, ಆಕೆಗೆ ಯಾವುದೇ ಮಾಹಿತಿ ನೀಡದೇ ತನ್ನ ಮೊದಲ ಹೆಂಡತಿಯ ಬಳಿ ಮರಳಿ ಹೋಗಿದ್ದಾನೆ ಎಂಬುದು ಪಿರ್ಯಾದಿಯ ಮೂಲವಿವರ.
ಕಲಾವತಿ ಅವರು ಈ ಕುರಿತು 01/07/2025 ರಂದು ಮಧ್ಯಾಹ್ನ 3:00 ಗಂಟೆಯಲ್ಲಿ ವಿಚಾರಣೆ ಮಾಡಲು ಹೋಗಿದಾಗ, ಸುಪ್ರೀತ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಗಳಿಂದ ಹೊಡೆದು ದೈಹಿಕ ಹಾಗೂ ಮಾನಸಿಕವಾಗಿ ತೊಂದರೆ ನೀಡಿದರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿಯ ವರದಿ (FIR) ದಾಖಲಾಗಿದೆ. ಪ್ರಕರಣ ಸಂಬಂಧ ತನಿಖೆ ಆರಂಭವಾಗಿದ್ದು, ಆರೋಪಿಯನ್ನು ಶೀಘ್ರ ಬಂಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

