ಸುದ್ದಿ 

ದಾಸರಹಳ್ಳಿಯಲ್ಲಿ ಮದ್ಯಪಾನ ಮಾಡಿ ಚಾಲನೆ – ಮೂರು ವಾಹನಗಳಿಗೆ ಡಿಕ್ಕಿ, ಓರ್ವಿಗೆ ಗಾಯ ಬೆಂಗಳೂರು, 05 ಜುಲೈ 2025

Taluknewsmedia.com

ದಾಸರಹಳ್ಳಿ ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸ್ಕೂಟರ್ ಸವಾರನಿಗೆ ಗಾಯವಾಗಿದ್ದು, ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಕಾರು ಚಾಲನೆ ಮಾಡುತ್ತಿದ್ದ ಯುವಕನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ದಿನಾಂಕ 05-07-2025 ರಂದು ಬೆಳಗ್ಗೆ ಸುಮಾರು 8:30 ಗಂಟೆಯ ವೇಳೆ ಕಾರು ನಂಬರ್ KA-05-AN-2815 ಅನ್ನು ನಂದ ಕೃಷ್ಣ (ವಯಸ್ಸು 25) ಎಂಬವರು ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದ ವೇಳೆ, ಅವರು ದಾಸರಹಳ್ಳಿ ಮುಖ್ಯರಸ್ತೆಯಲ್ಲಿ ಆಟೋ ರಿಕ್ಷಾ ಮತ್ತು ಸ್ಕೂಟರ್ (ನಂ. KA-03-KY-5788)ಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಅದೇ ವೇಗದಲ್ಲಿ ಕಾರು ವಿದ್ಯುತ್ ಕಂಬಕ್ಕೆ ಬಡಿದ ಪರಿಣಾಮ ಅಪಘಾತ ಉಂಟಾಗಿದೆ.

ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಿದ ಕೋಬ್ರಾ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೇಬಲ್ ಅಮೀತ್ ಮುಳವಾಡ (PC 21928) ಅವರು ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿ, ಗಾಯಗೊಂಡವರನ್ನು ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ಕಳುಹಿಸಿದರು. ಸ್ಕೂಟರ್ ಸವಾರನನ್ನು ಸುಲ್ತಾನ್ ಎಂದು ಗುರುತಿಸಲಾಗಿದೆ.

ನಂತರ ನಂದ ಕೃಷ್ಣನನ್ನು ಠಾಣೆಗೆ ಕರೆತರುವಾಗ, ಪಿಎಸ್‌ಐ ಲಕ್ಷ್ಮೀಕುಮಾರ್ ಅವರ ಉಪಸ್ಥಿತಿಯಲ್ಲಿ ಆಲ್ಕೋಮೀಟರ್ ಪರೀಕ್ಷೆ ನಡೆಸಲಾಗಿದ್ದು, 71 MG/100ML ಮದ್ಯಪಾನ ಪ್ರಮಾಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನಂದ ಕೃಷ್ಣ ವಿರುದ್ಧ ಸಂಚಾರಿ ಕಾನೂನು ಹಾಗೂ ಮದ್ಯವ್ಯಸನ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Related posts