ಸುದ್ದಿ 

ಉಬರ್ ಟ್ಯಾಕ್ಸಿ ಡ್ರೈವರ್‌ನ ಮೊಬೈಲ್ ಹಾಗೂ ಹಣ ವಂಚನೆ: ಯುವಕ ಪರಾರಿಯಾಗಿರುವ ಘಟನೆ

Taluknewsmedia.com

ಬೆಂಗಳೂರು, ಜುಲೈ 9 2025
ನಗರದ ಉಬರ್ ಟ್ಯಾಕ್ಸಿ ಚಾಲಕರೊಬ್ಬರು ಮೋಸಗೊಳಿಸಲ್ಪಟ್ಟ ಘಟನೆ ಇಂದು ಬೆಳಕಿಗೆ ಬಂದಿದೆ. ರಿಷಬ್ ಶ್ರೀವಾತ್ಸವ್ ಎಂದು ಪರಿಚಯಿಸಿದ ಯುವಕ, ಬಾಡಿಗೆ ವಾಹನದಲ್ಲಿ ಪ್ರಯಾಣಿಸುತ್ತಾ ಡ್ರೈವರ್‌ನ ಮೊಬೈಲ್ ಹಾಗೂ ಖಾತೆಗಳಿಂದ ಹಣವನ್ನು ವಂಚಿಸಿ ಪರಾರಿಯಾಗಿದ್ದಾನೆ.
ಮಂಜುನಾಥ್ ಅವರು ದಿನಾಂಕ 28/06/2025 ರಂದು ಮಧ್ಯಾಹ್ನ 2:30ಕ್ಕೆ ಒಬ್ಬ ಗ್ರಾಹಕರನ್ನು ಹೊಸರೋಡ್ ಪ್ರದೇಶದಿಂದ ಪಿಕ್‌ಅಪ್ ಮಾಡಿ ನಾಗವಾರದ ಎಲಿಮೆಂಟ್ಸ್ ಮಾಲ್‌ಗೆ ಕರೆದುಕೊಂಡು ಹೋಗಿದ್ದರು. ಅಲ್ಲೆ ಇಳಿದ ಯುವಕ “ನಾನು 10 ನಿಮಿಷಗಳಲ್ಲಿ ಬರುತ್ತೇನೆ” ಎಂದು ಹೇಳಿ ಹಿಂತಿರುಗಿ ಬಂದಿದ್ದನು.

ತನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಹೇಳಿ, ಚಾಲಕರ ಕಾರಿನಲ್ಲಿ ಚಾರ್ಜ್ ಹಾಕಿಕೊಳ್ಳುತ್ತಾ, ಬಳಿಕ ಫೋಟೋ ತೆಗೆದು ಕರೆ ಮಾಡಲು ಚಾಲಕರ ರಿಯಲ್ ಮಿ ಪಿ3 ಪ್ರೋ ಮೊಬೈಲ್ ಅನ್ನು ಕೇಳಿದ್ದನು. ಚಾಲಕರು ವಿಶ್ವಾಸದಿಂದ ಕೊಟ್ಟ ಮೊಬೈಲ್ ಸಹಿತ ಯುವಕ ಪರಾರಿಯಾಗಿದ್ದಾನೆ.

ಮಾತ್ರವಲ್ಲದೆ, ಡ್ರೈವರ್‌ರ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು ₹60,000 ಹಣವನ್ನು ಫೋನ್‌ಪೇ ಮೂಲಕ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಬ್ಯಾಂಕ್ ಖಾತೆ ವಿವರಗಳು:

  1. ಕೆನರಾ ಬ್ಯಾಂಕ್: ₹40,000
  2. ಇನ್ನೊಂದು ಖಾತೆ: ₹20,000

ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Related posts