ಸುದ್ದಿ 

ಸಾತನೂರಿನಲ್ಲಿ ಭೂ ಹಗರಣ: ಒಂದೇ ನಿವೇಶನವನ್ನು ಎರಡು ಬಾರಿ ಮಾರಾಟ ಮಾಡಿದ ಆರೋಪ

Taluknewsmedia.com

ಬೆಂಗಳೂರು, ಜುಲೈ 9 2025:


ಸಾತನೂರು ಗ್ರಾಮದಲ್ಲಿ ಒಂದೇ ನಿವೇಶನವನ್ನು ಬೇರೆಯವರ ಹೆಸರಿಗೆ ಮತ್ತೆ ಮಾರಾಟ ಮಾಡಿದ ಭೂ ಹಗರಣ ಬೆಳಕಿಗೆ ಬಂದಿದೆ. ಈ ಕುರಿತು ಶ್ರೀ ನೀರಜ್ ಕುಮಾರ್ ಚೌರಾಸಿಯಾ ಅವರು ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನೀರಜ್ ಕುಮಾರ್ ಅವರು ಸೈಟ್ ನಂ.47 ಮತ್ತು 48 ಅನ್ನು ದಿನಾಂಕ 05/01/2013 ರಂದು ಶ್ರೀ ಪೌಲ್ ರಾಜ್ ಎಂ.ಕೆ. ಅವರಿಂದ ಖರೀದಿಸಿದ್ದರು. ಆದರೆ ನಂತರದ ಪರಿಶೀಲನೆಯಿಂದ ಈ ಸೈಟ್‌ಗಳನ್ನು ಮೂಲದ ಮಾಲೀಕರಾದ ವಿ. ಮೋಹನ್ ರಾಜು ಅವರು 06/07/2017 ರಂದು ಮತ್ತೊಂದು ದಂಪತಿಯಾದ ಶ್ರೀ ಸುನೀಲ್ ಕುಮಾರ್ ಮತ್ತು ಶ್ರೀಮತಿ ಆಶಾ ಅವರಿಗೆ ಮಾರಾಟ ಮಾಡಿರುವುದು ದೃಢವಾಗಿದೆ.

ಇತ್ತೀಚೆಗೆ ಪೌಲ್ ರಾಜ್ ಅವರು ಲೇಔಟ್ ಪರಿಶೀಲನೆಗೆ ಬಂದಾಗ, ನೆರೆವಾಸಿ ಶ್ರೀ ಸಂಜೀವ್ ಕುಮಾರ್ ಸಾಯಿ ಅವರ ಕಾಂಪೌಂಡ್ ಗೋಡೆಯನ್ನು ಕೆಡವಲಾಗಿದ್ದು, “ಮಾರಾಟಕ್ಕಿಲ್ಲ” ಎಂಬ ಬೋರ್ಡ್ ಅಳವಡಿಸಲಾಗಿತ್ತು. ಈ ಕುರಿತು ದಾಖಲಾತಿಗಳನ್ನು ಪರಿಶೀಲಿಸಿದ ವೇಳೆ ಮೋಸ ನಡೆದಿರುವುದು ಸ್ಪಷ್ಟವಾಗಿದೆ.

ಮೂಲ ಮಾಲೀಕರು ಏಕಕಾಲದಲ್ಲಿ ಎರಡು ಬಾರಿ ಸೈಟ್ ಮಾರಾಟ ಮಾಡಿ ದೂರುದಾರರಿಗೆ ಆರ್ಥಿಕ ನಷ್ಟವಾಗುವಂತೆ ಮಾಡಿದ್ದಾರೆ ಎಂಬ ಆರೋಪ ಹೊರಸಲಾಗಿದೆ. ಈ ಬಗ್ಗೆ ಬಾಗಲೂರು ಪೋಲಿಸ್ ಠಾಣೆಯಲ್ಲಿ ತನಿಖೆ ಮುಂದುವರೆದಿದೆ.

Related posts