ಸುದ್ದಿ 

ಇಂಜಿನಿಯರಿಂಗ್ ಪದವಿದಾರ ಯುವತಿಗೆ ಮೊಬೈಲ್ ಮೂಲಕ ಕಿರುಕುಳ – ಅಶ್ಲೀಲ ಮೆಸೇಜ್, ಬೆದರಿಕೆ ನೀಡಿದ ಅನಾಮಿಕನ ವಿರುದ್ಧ ದೂರು

Taluknewsmedia.com

ಬೆಂಗಳೂರು, ಜುಲೈ 9:2025
ನಗರದ ವಿಜಯನಗರ ಪ್ರದೇಶದಲ್ಲಿ ಇಂಜಿನಿಯರಿಂಗ್ ಮುಗಿಸಿ ಮನೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದ ಯುವತಿಗೆ, ಅನಾಮಿಕ ವ್ಯಕ್ತಿಯೊಬ್ಬನು ಎರಡು ವರ್ಷಗಳಿಂದ ವಿವಿಧ ಮೊಬೈಲ್ ನಂಬರ್‌ಗಳಿಂದ ಅಶ್ಲೀಲ ಸಂದೇಶಗಳು ಮತ್ತು ಬೆದರಿಕೆ ನೀಡುತ್ತಿರುವುದಾಗಿ ತಡವಾಗಿ ಬೆಳಕಿಗೆ ಬಂದಿದೆ.

ಪೀಡಿತೆಯ ತಂದೆಯ ಮಹಾದೇವ್ ಪ್ರಸಾದ್ ರವರ ಮಾಹಿತಿ ಪ್ರಕಾರ, 76194933395, 8688807542 ಮತ್ತು 7022337134 ಮುಂತಾದ ನಂಬರ್‌ಗಳಿಂದ “ನೀನು ಪ್ರೀ ಇದ್ದೀಯಾ”, “ಇಲ್ಲೋಗೋಣ ಬಾ” ಎಂಬ ಸಂದೇಶಗಳು ಬರುತ್ತಿದ್ದುವು. ಪೀಡಕನು ಯುವತಿಯನ್ನು ಹಿಂಬಾಲಿಸುತ್ತಿದ್ದಾನೆಂಬ ಆರೋಪವೂ ಇದೆ.

ಇನ್ನೂ ತೀವ್ರವಾಗಿ, ಆ ವ್ಯಕ್ತಿ ಬೆತ್ತಲೆ ಫೋಟೋಗಳನ್ನು ಕಳುಹಿಸಿ “ನೀನು ಬರದೆ ಹೋದರೆ ನಿನಗೆ ಏನು ಮಾಡಬೇಕು ಎಂಬುದು ನನಗೆ ಗೊತ್ತು” ಎಂಬ ಬೆದರಿಕೆಯ ಮೆಸೇಜ್‌ಗಳನ್ನು ಕೂಡ ಕಳುಹಿಸಿದ್ದಾನೆ.

ಈ ಪ್ರಕರಣದ ಕುರಿತು ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ತನಿಖೆ ಪ್ರಾರಂಭಿಸಿದ್ದು, ಶೀಘ್ರದಲ್ಲೇ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

Related posts