ಕೆಲಸದ ಹೆಸರಿನಲ್ಲಿ ಮನೆ ಬಿಟ್ಟು ಹೋದ ಮಹಿಳೆ ಕಾಣೆಯಾಗಿದ್ದಾಳೆ
ಬೆಂಗಳೂರು, ಜುಲೈ 12:2025
ನಗರದ ಯಲಹಂಕ ಪ್ರದೇಶದಲ್ಲಿ 48 ವರ್ಷದ ಮಹಿಳೆಯೊಬ್ಬರು ಕೆಲಸಕ್ಕೆಂದು ಹೊರಟು ಮನೆಗೆ ಮರಳದೆ ಕಾಣೆಯಾಗಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಮಹಿಳೆಯ ಪುತ್ರಿ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಗೆ ಸೇರಿದ ಗಾಯತ್ರಿ ಎಂಬವರು ಕಳೆದ 13 ವರ್ಷಗಳಿಂದ ತಮ್ಮ ಪತಿ, ಪುತ್ರ ಹಾಗೂ ಕುಟುಂಬದೊಂದಿಗೆ ಯಲಹಂಕದ ಬಾಡಿಗೆ ಮನೆಯಲ್ಲಿ ವಾಸವಾಗುತ್ತಿದ್ದರು. ದಿನಾಂಕ 22-06-2025 ರಂದು ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟ ಅವರು ಇನ್ನೂ ಮನೆಗೆ ಮರಳಿಲ್ಲ.
ಕಾಣೆಯಾದ ಮಹಿಳೆ ಮದ್ಯಪಾನಕ್ಕೆ ದಾಸಳಾಗಿರುತ್ತಾಳೆ ಮತ್ತು ಆಗಾಗ್ಗೆ ಮನೆಯಿಂದ ಹೊರಹೋಗುವ ಅಭ್ಯಾಸವಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಬಾರಿ ಅವರು ವಾಪಸಾಗದೆ ಇರುವುದರಿಂದ ಸಂಬಂಧಿಕರು ಹಾಗೂ ಕೆಲಸದ ಸ್ಥಳಗಳಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇದರಿಂದ ತೀವ್ರ ಆತಂಕಗೊಂಡ ಕುಟುಂಬದವರು, 08-07-2025 ರಂದು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಗಾಯತ್ರಿಯವರ ಪತ್ತೆಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಸಾರ್ವಜನಿಕರಿಗೆ ಮನವಿ:
ಈ ಮಹಿಳೆಯ ಬಗ್ಗೆ ಯಾವುದೇ ಮಾಹಿತಿಯಿದ್ದಲ್ಲಿ ಯಲಹಂಕ ಪೊಲೀಸ್ ಠಾಣೆಗೆ ಸಂಪರ್ಕಿಸಲು ಮನವಿ ಮಾಡಲಾಗಿದೆ.

