ದೇವಾಲಯದ ಹುಂಡಿಯಿಂದ ಹಣ ಕಳವು – ಅರ್ಚಕರಿಂದ ಚಿಕ್ಕಜಾಲ ಪೊಲೀಸ್ ದೂರು
ಬೆಂಗಳೂರು ಜುಲೈ 12 –2025
ಸೋಣ್ಣಪ್ಪನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ನಡೆದ ಘಟನೆ ದಾಖಲಾಗಿದೆ. ಸುಮಾರು 22 ವರ್ಷಗಳಿಂದ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯೊಬ್ಬರು, ಜುಲೈ 7ರಂದು ನೆಲಗುಳಿ ಗ್ರಾಮದ ವಾರ್ಷಿಕ ಜಾತ್ರೆಗೆ ಪೂಜಾರ್ಥ ತೆರಳಿದ್ದರು.
ಅವರು ಇರುವಾಗ, ಅವರ ಸಹೋದರರು ದೇವಸ್ಥಾನದಲ್ಲಿ ಸಂಜೆ ಪೂಜೆಯನ್ನು ನೆರವೇರಿಸಿ, ರಾತ್ರಿ 8:30ಕ್ಕೆ ಬಾಗಿಲು ಹಾಕಿ ಮನೆಗೆ ಹಿಂದಿರುಗಿದ್ದರು. ಆದರೆ ಜುಲೈ 8ರಂದು ಬೆಳಿಗ್ಗೆ 6:30ಕ್ಕೆ ಅರ್ಚಕರು ದೇವಾಲಯಕ್ಕೆ ಬಂದು ಬಾಗಿಲು ತೆರೆಯುತ್ತಲೇ ಹುಂಡಿಯ ಹಣ ಕಳ್ಳತನಗೊಂಡಿರುವುದು ಬೆಳಕಿಗೆ ಬಂದಿದೆ.
ಅವರು ಕೂಡಲೇ ದೇವಸ್ಥಾನ ಸಮಿತಿಗೆ ವಿಷಯವನ್ನು ತಿಳಿಸಿದ್ದು, ಕಳುವಾದ ಹಣದ ಅಂದಾಜು ಮೌಲ್ಯ ₹2500 ಆಗಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಅರ್ಚಕರು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದೇವಾಲಯದ ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್ ಪರಿಶೀಲನೆಯ ಮೂಲಕ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುತ್ತಿದ್ದಾರೆ.

