ಯಲಹಂಕದಲ್ಲಿ ಎಂ.ಡಿ.ಎಂ.ಎ ಮಾರಾಟ – ಇಬ್ಬರು ವಿದೇಶಿಯರ ವಿರುದ್ಧ ಎನ್‌ಡಿಪಿಎಸ್ ಕೇಸು ದಾಖಲು
ಬೆಂಗಳೂರು, ಜುಲೈ 12 :2025
ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಅಕ್ರಮ ಮಾರಾಟದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ವಿದೇಶಿಯರನ್ನು ಬಂಧಿಸಿದ್ದಾರೆ.
ದಿನಾಂಕ 10/07/2025 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗೆ ಬಾತ್ಮೀದಾರರಿಂದ ಮಾಹಿತಿ ಬಂದಿದ್ದು, ಯಲಹಂಕದ ವಿದ್ಯಾರಣ್ಯಪುರ ಹತ್ತಿರದ ಒಂದು ಮನೆಯಲ್ಲಿರುವ ಇಬ್ಬರು ವಿದೇಶೀಯರು – 1) ಅಡ್ಮಾಕೋ ಬ್ರೈಟ್ ಮತ್ತು 2) ಎಂಕೆಟಾಯಿ ಕೊಫಿ ಎಂಬವರು ತಮ್ಮ ವಸತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮೆಥಾಂಫೆಟಮಿನ್/ಎಂ.ಡಿ.ಎಂ.ಎ ಅನ್ನು ಸಂಗ್ರಹಿಸಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಲು ಉದ್ದೇಶಿಸಿದ್ದಾಗಿ ತಿಳಿದುಬಂದಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ, ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಮಾದಕ ವಸ್ತುಗಳು ಅಕ್ರಮವಾಗಿ ಸಿಕ್ಕಿದ್ದು, ಆರೋಪಿಗಳು ಎನ್‌ಡಿಪಿಎಸ್ ಆಕ್ಟ್ 1985 ಪ್ರಕಾರ ಗಂಭೀರ ಆರೋಪಗಳಿಗೆ ಒಳಪಟ್ಟಿದ್ದಾರೆ.
ಈ ಕುರಿತು ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

