ಸುದ್ದಿ 

ಸೈಟ್ ಹೆಸರಿನಲ್ಲಿ ₹33.25 ಲಕ್ಷ ವಂಚನೆ ಜೀವ ಬೆದರಿಕೆ ನೀಡಿದ ವ್ಯಕ್ತಿಗೆ ವಿರುದ್ಧ ಎಫ್‌ಐಆರ್

Taluknewsmedia.com

ಬೆಂಗಳೂರು, ಜುಲೈ 12:2025


ನಗರದ ನಿವಾಸಿ ಯುವತಿಗೆ ಸೈಟ್ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿ, ನಂತರ ಜೀವ ಬೆದರಿಕೆ ನೀಡಿದ ಘಟನೆ ನಡೆದಿದೆ. ಈ ಸಂಬಂಧ ಮಾರನಹಳ್ಳಿ ಗ್ರಾಮದ ರವಿಕುಮಾರ್ ಎಸ್.ವಿ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಜನಿ ಡಿ ಕೆ ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ಅಪ್ಪ-ಅಮ್ಮನೊಂದಿಗೆ ವಾಸವಾಗಿದ್ದು, ಸುಮಾರು 5 ವರ್ಷಗಳಿಂದ ರವಿಕುಮಾರ್ ಎಸ್.ವಿ ಎಂಬ ವ್ಯಕ್ತಿಯ ಪರಿಚಯದಲ್ಲಿದ್ದರು. ಈತನು ಅವರ ಅಣ್ಣ ಹರೀಶಕುಮಾರ್ ಅವರ ಸ್ನೇಹಿತನಾಗಿದ್ದರಿಂದ ಆಗಾಗ ಅವರ ಮನೆಯಲ್ಲಿ ಬರುತ್ತಿದ್ದನು.

ರಜನಿ ಡಿ ಕೆ ಅವರ ಕುಟುಂಬವು ಎರಡು ವರ್ಷಗಳ ಹಿಂದೆ ದೊಡ್ಡ ಜಾಲ ಗ್ರಾಮದ ಜಮೀನನ್ನು ಮಾರಾಟ ಮಾಡಿ ₹50 ಲಕ್ಷ ಹಣ ಪಡೆದಿತ್ತು. ಈ ಹಣದಿಂದ ಅವರು ಸೈಟ್ ಖರೀದಿಸಲು ಇಚ್ಛಿಸಿದರು. ಈ ಸಂದರ್ಭದಲ್ಲಿ ರವಿಕುಮಾರ್ ಎಸ್.ವಿ “ನಾನು ನಿಮಗೆ ಉತ್ತಮ ಸ್ಥಳದಲ್ಲಿ ಸೈಟ್ ಕೊಡಿಸುತ್ತೇನೆ” ಎಂದು ನಂಬಿಕೆ ಮೂಡಿಸಿ, 2023ರ ಜನವರಿ ತಿಂಗಳಲ್ಲಿ ₹25 ಲಕ್ಷ ಹಾಗೂ ಫೆಬ್ರವರಿಯಲ್ಲಿ ₹8.25 ಲಕ್ಷ, ಒಟ್ಟು ₹33.25 ಲಕ್ಷ ಹಣವನ್ನು ಪಡೆದಿದ್ದನು. ಹಣ ಪಾವತಿಗೆ ಚೆಕ್ ನಂಗಳು – 10102734, 10102732, 10102733 – ಬಳಕೆಯಾಗಿವೆ.

ಆದರೆ ಅದಾದ ಬಳಿಕವೂ ಅವರು ಸೈಟ್ ಕೊಡಿಸದೇ, ಹಣವನ್ನು ವಾಪಸ್ಸು ಕೂಡ ಮಾಡದೆ ಕುಳಿತುಕೊಂಡಿದ್ದಾನೆ. 2025ರ ಜೂನ್ 25ರಂದು, ಪಿರ್ಯಾದಿದಾರರು ರವಿಕುಮಾರ್ ಅವರ ಮನೆಗೆ ತೆರಳಿ ಹಣ ಅಥವಾ ಸೈಟ್ ವಿಚಾರಿಸಿದಾಗ, ಈತನು ಗಲಾಟೆ ಮಾಡಿದ್ದು, “ಇನ್ನೊಮ್ಮೆ ನಮ್ಮ ಮನೆಗೆ ಬಂದರೆ ನಿನ್ನ ಸುಮ್ಮನೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಚಿಕ್ಕಜಾಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Related posts