ಸುದ್ದಿ 

ಆನ್‌ಲೈನ್‌ OLX ವಂಚನೆ: ದಂಪತಿಯ ₹4.15 ಲಕ್ಷ ನಷ್ಟ – ಸೈಬರ್ ಕ್ರೈಂ ಠಾಣೆಗೆ ದೂರು

Taluknewsmedia.com

ಬೆಂಗಳೂರು, ಜುಲೈ 14:2025


ಆನ್‌ಲೈನ್‌ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇತ್ತೀಚೆಗಷ್ಟೇ ಬೆಂಗಳೂರಿನ ದಂಪತಿ ಒಬ್ಬರು ಹಳೆಯ ವಾಹನ ಮಾರಾಟ ಮಾಡುವಾಗ OLX ಪ್ಲಾಟ್‌ಫಾರ್ಮ್‌ನಲ್ಲಿ ₹4.15 ಲಕ್ಷ ವಂಚಿತರಾಗಿರುವ ಘಟನೆ ನಡೆದಿದೆ.

ಶೇಖರ್ ದುಗ್ಗಿರಲ ಅವರು ನೀಡಿರುವ ದೂರಿನ ಪ್ರಕಾರ, ಅವರು ದಿನಾಂಕ 04/07/2025 ರಂದು ತಮ್ಮ ಹಳೆಯ ವಾಹನವನ್ನು OLX ಮೂಲಕ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಖರೀದಿದಾರನಂತೆ ನಟನೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬನು ಅವರನ್ನು ಸಂಪರ್ಕಿಸಿ, ವಾಹನ ಖರೀದಿಸುವ ನೆಪದಲ್ಲಿ ನಂಬಿಕೆ ಮೂಡಿಸಿ ಹಣ ಪಾವತಿಸಬೇಕೆಂದು ಒತ್ತಾಯಿಸಿದ್ದಾನೆ.

ದಂಪತಿಗಳು ನಂಬಿಕೆಗೆ ಒಳಗಾಗಿ ತಮ್ಮಿಂದ ಕೆಳಗಿನಂತೆ ವಿವಿಧ ಆನ್‌ಲೈನ್‌ ಪಾವತಿ ವಿಧಾನಗಳ ಮೂಲಕ ಹಣ ವರ್ಗಾಯಿಸಿದ್ದಾರೆ:

  1. ₹2,00,000 – IMPS ಮೂಲಕ Sekhar Duggirala ಮತ್ತು Arti Duggirala ಅವರ ಜಂಟಿ ಬ್ಯಾಂಕ್ ಖಾತೆಗ
  2. ₹90,000 – Sekhar Duggirala ಗೆ UPI ಮೂಲ
  3. ₹84,000 – Sekhar Duggirala ಗೆ ಕ್ರೆಡಿಟ್ ಕಾರ್ಡ್ ಮೂಲಕ
  4. ₹42,000 – Arti Duggirala ಗೆ UPI ಮೂಲಕ
    ಒಟ್ಟು ₹4,15,000 ನಷ್ಟವಾಗಿದೆ.
    ವಂಚನೆ ಆಗಿದಂತೆ ದಂಪತಿಗಳು ತಕ್ಷಣವೇ ಭಾರತೀಯ ಸೈಬರ್ ಅಪರಾಧ ಪೋರ್ಟಲ್ (cybercrime.gov.in) ನಲ್ಲಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಕ್ನಾಲೆಜ್‌ಮೆಂಟ್ ಸಂಖ್ಯೆಗಳು ಕೂಡಾ ಪಡೆದಿದ್ದಾರೆ.

ವಂಚನೆ ನಡೆಸಿದ ವ್ಯಕ್ತಿಯ ಮೊಬೈಲ್ ಸಂಖ್ಯೆ +91-9630273067 ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ.

ಸೈಬರ್ ಅಪರಾಧ ಇಲಾಖೆ ಸೂಚನೆ ನೀಡಿದ್ದು:
“ಆನ್‌ಲೈನ್ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಯಾವುದೇ ವ್ಯಕ್ತಿಯಿಂದ ಹಣ ಪಾವತಿ ಮಾಡುವ ಮೊದಲು ಸೂಕ್ತ ಪರಿಶೀಲನೆ ಮಾಡಬೇಕು.”

ಇಂತಹ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ತಮ್ಮ ಆರ್ಥಿಕ ಭದ್ರತೆಗೆ ಜಾಗರೂಕರಾಗಿರಬೇಕೆಂಬುದು ತೀವ್ರವಾಗಿ ಬೇಡಿಕೆಯಾಗಿದೆ.

Related posts