ಟವರ್‌ನಿಂದ ಕೇಬಲ್ ಕತ್ತರಿಸಿ ಕಳ್ಳತನ – Airtel BTS ನಿಂದ ₹25,000 ಮೌಲ್ಯದ ತಂತಿ ಕಳವು
ಬೆಂಗಳೂರು ಗ್ರಾಮಾಂತರ, ಜುಲೈ 14:2025
ಇಂಡಸ್ ಕಂಪನಿಗೆ ಸೇರಿದ ಗನ್ ಸೈಟ್ ಎಂಬ ಸಹಕಂಪನಿಯ ಪೆಟ್ರೋಲಿಂಗ್ ಸೂಪರ್‌ವೈಸರ್ ನೀಡಿದ ದೂರಿನ ಮೇರೆಗೆ, ದೊಡ್ಡಬಳ್ಳಾಪುರ–ದೇವನಹಳ್ಳಿ–ರಾಜಾನುಕುಂಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಪನಿಯ ಬಿಟಿಎಸ್ ಟವರ್‌ಗಳಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಪೆಟ್ರೋಲಿಂಗ್ ಸೂಪರ್‌ವೈಸರ್‌ರಾಗಿ ಕಳೆದ 2 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನರಸಿಂಹಮೂರ್ತಿ ಬಿ ರ್ ಅವರು, ಜುಲೈ 10ರಂದು ಬೆಳಿಗ್ಗೆ ಟವರ್ ವೀಕ್ಷಣೆ ಮಾಡುವಾಗ ಶೆಲ್ಫ್ ಡೋರ್ ಮುರಿದು ಒಳನುಗ್ಗಿರುವುದು ಗಮನಿಸಿ ಪರಿಶೀಲನೆ ನಡೆಸಿದಾಗ, ಕಲಬುರ್ಗಿಯಿಂದ ಅಳವಡಿಸಲಾಗಿದ್ದ Airtel BTS ಗೆ ಸೇರಿದ ₹25,000 ಮೌಲ್ಯದ 450-500 ಮೀಟರ್ ಉದ್ದದ ಕೇಬಲ್‌ಗಳನ್ನು ಕತ್ತರಿಸಿಕೊಂಡು ಕಳ್ಳತನ ಮಾಡಲಾಗಿರುವುದು ತಿಳಿದುಬಂದಿದೆ.
ಈ ಬಗ್ಗೆ ಕೂಡಲೇ ಕಂಪನಿಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ನರಸಿಂಹಮೂರ್ತಿ ಬಿ ಆರ್ ಜುಲೈ 11 ರಂದು ಮಧ್ಯಾಹ್ನ 12:20ಕ್ಕೆ ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಯಲಹಂಕ ಉಪನಗರ ಠಾಣೆ ವ್ಯಾಪ್ತಿಯಲ್ಲಿ BNS ಸೆಕ್ಷನ್ 303(2) ಅಡಿಯಲ್ಲಿ ಕೇಸನ್ನು ದಾಖಲಿಸಿ ತನಿಖೆ ಪ್ರಾರಂಭಿಸಲಾಗಿದೆ.

