ಫ್ಲೈಓವರ್‌ನಲ್ಲಿ ಅಪಘಾತ – ಬೈಕ್ ಸವಾರ ಗಂಭೀರ ಗಾಯ
ಬೆಂಗಳೂರು, ಜುಲೈ 14:2025
ರಾಜಾನುಕುಂಟೆ ಫ್ಲೈಓವರ್ ಮೇಲೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜುಲೈ 11ರಂದು ಸಂಜೆ ನಡೆದಿದೆ.
ಮಂಜುನಾಥ ಗೌಡ ಅವರು ತಮ್ಮ ಬಾಬು ಅವರ KA50L1921 ಸಂಖ್ಯೆಯ ಸೆಂಡರ್ ಪ್ಲಸ್ ಮೋಟಾರ್ ಸೈಕಲ್‌ನಲ್ಲಿ ಹೆಸರಘಟ್ಟ ಕಡೆಗೆ ತೆರಳುತ್ತಿದ್ದಾಗ, ರಾಜಾನುಕುಂಟೆಯಿಂದ ಗಾನಹಳ್ಳಿಯ ದಿಕ್ಕಿಗೆ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಬಂದ KA41MA4855 ನಂಬರ್‌ನ ಕಾರು ಡಿಕ್ಕಿ ಹೊಡೆದಿದೆ.
ಈ ಅಪಘಾತದಿಂದಾಗಿ ಮಂಜುನಾಥ ಗೌಡ ಅವರಿಗೆ ತಲೆ, ಬಲಗಾಲು ಮತ್ತು ಪಾದದ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ರಾಜನಕುಂಟೆ ಬಳಿಯ ಚಿಗುರು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನ ವಿರುದ್ಧ BNS ಸೆಕ್ಷನ್ 281 ಮತ್ತು 125(A) ಪ್ರಕಾರ 203/2025ರಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ರಾಜನಕುಂಟೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ

