ಘಾಟಿ ಸುಬ್ರಮಣಿ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಕಾರ್ಯದರ್ಶಿಗೆ ಕೆ.ಆರ್.ಎಸ್. ಕಾರ್ಯಕರ್ತರಿಂದ ಅಡ್ಡಿಪಡೆ – ಪೊಲೀಸ್ ದೂರು ದಾಖಲು
ಬೆಂಗಳೂರು, ಜುಲೈ 15: 2025
ಘಾಟಿ ಸುಬ್ರಮಣಿ ದೇವಸ್ಥಾನದ ಕ್ಷೇತ್ರ ಅಭಿವೃದ್ಧಿ ಕಾರ್ಯದರ್ಶಿಯೊಬ್ಬರಿಗೆ ಸರ್ಕಾರಿ ಕರ್ತವ್ಯದಿಂದ ಹಿಂದಿರುಗುವ ವೇಳೆ ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರು ಅಡ್ಡಿ ಪಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂಬಂಧಿಸಿದ ದೂರುವನ್ನು ಅವರು ನಿಕಟದ ಚಿಕ್ಕಜಾಲ ಪೊಲೀಸ್ ಠಾಣೆಗೆ ನೀಡಿದ್ದಾರೆ.
ದಿನೇಶ್ ಪಿ ಅವರ ಪ್ರಕಾರ ಪ್ರಕಾರ, ಅವರು ರವಿವಾರದಂದು ಬೆಳಿಗ್ಗೆ 10:00 ಗಂಟೆಗೆ ದೇವಸ್ಥಾನಕ್ಕೆ ತೆರಳಿ, ಅಲ್ಲಿನ ಕಾರ್ಯಗಳನ್ನು ಮುಗಿಸಿಕೊಂಡು ಸಂಜೆ 6:30ರ ವೇಳೆಗೆ ಬೆಂಗಳೂರಿಗೆ ಹೊರಟಿದ್ದರು. ಈ ಸಂದರ್ಭ ಭಜೋಳಿ ಪ್ರದೇಶದ ಬಳಿ ಕೆಲ ಅಪರಿಚಿತ ವ್ಯಕ್ತಿಗಳು ಅವರ ಸರ್ಕಾರಿ ವಾಹನವನ್ನು ನಿಲ್ಲಿಸಿ, “ನೀನು ಸರ್ಕಾರಿ ವಾಹನದಲ್ಲಿ ತಿರುಗಾಡುತ್ತಿದ್ದೀಯಾ? ಐಡಿ ಕಾರ್ಡ್ ತೋರಿಸು, ಲಾಗ್ ಬುಕ್ ತೋರಿಸು” ಎಂದು ಕೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಅವರ ಪ್ರಕಾರ, ಅವರು ತಮ್ಮ ಅಧಿಕೃತ ಕೆಲಸದ ನಿಮಿತ್ತ ದೇವಸ್ಥಾನಕ್ಕೆ ಹೋಗಿದ್ದುದಾಗಿ ತಿಳಿಸಿದರೂ ಕೂಡ ಆ ಗುಂಪು ಕೇಳಿ ಕೊಳ್ಳದೇ, ಗುಂಪು ಸೇರಿ ಅವರ ಮೇಲೆ ಹಲ್ಲೆಗೆ ಮುಂದಾಗಿರುವುದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ಅವರ ಹಿಂದೆ ಬರುತ್ತಿದ್ದ ಇನ್ನಿತರ ಸರ್ಕಾರಿ ವಾಹನಗಳಿಗೂ ಹಾಗೂ ತುರ್ತು ವೈದ್ಯಕೀಯ ಸೇವೆಯಲ್ಲಿದ್ದ ಆಂಬ್ಯೂಲೆನ್ಸ್‌ಗೂ ದಾರಿ ನೀಡದೆ ತೊಂದರೆ ನೀಡಲಾಗಿದೆ.
ಈ ಕುರಿತು ಸಂಬಂಧಪಟ್ಟ ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಚಿಕ್ಕಜಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

