ಸುದ್ದಿ 

ಯಲಹಂಕದಲ್ಲಿ ಆಟೋರಿಕ್ಷಾ ಕಳ್ಳತನ: ₹1 ಲಕ್ಷ ಮೌಲ್ಯದ ವಾಹನ ಕಣ್ಮರೆಯಾಗಿದೆ

Taluknewsmedia.com

ಬೆಂಗಳೂರು, ಜುಲೈ 14:2025


ನಗರದ ಯಲಹಂಕ ಉಪನಗರದ ಅಟ್ಟೂರು ಮುನೇಶ್ವರ ಲೇಔಟ್‌ನಿಂದ ಆಟೋರಿಕ್ಷಾವೊಂದು ಕಳ್ಳತನವಾಗಿರುವ ಘಟನೆ ವರದಿಯಾಗಿದೆ. ಈ ಕುರಿತು ಸಂಬಂಧಿತ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಿವಕುಮಾರ್ ಅವರ ಪ್ರಕಾರ, ಅವರು ತಮ್ಮ KA-02-AF-5363 ನಂ ಬೇರಳೆ ಆಟೋರಿಕ್ಷಾವನ್ನು ಎರಡು ತಿಂಗಳ ಹಿಂದೆ ಬಾಡಿಗೆಗೆ ನೀಡಿದ್ದರು. ದಿನಾಂಕ 28/06/2025 ರಂದು ರಾತ್ರಿ 11 ಗಂಟೆಯ ನಂತರ, ಆಟೋನು ಮುನೇಶ್ವರ ಲೇಔಟ್‌ನಲ್ಲಿ ನಿಲ್ಲಿಸಲಾಗಿತ್ತು. ಆದರೆ ನಂತರದಿಂದ ಅದು ಕಾಣೆಯಾಗಿದೆ.

ಅನೇಕ ಕಡೆಗಳಲ್ಲಿ ಹುಡುಕಿದರೂ ಆಟೋ ಪತ್ತೆಯಾಗದ ಹಿನ್ನೆಲೆ, ಜುಲೈ 1 ರಂದು ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿವಕುಮಾರ ಈ ಆಟೋವನ್ನು ಯಾರೋ ಕಳ್ಳರು ಕದಿದುಕೊಂಡು ಹೋಗಿದ್ದಾರೆಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಕಳ್ಳತನವಾದ ಆಟೋರಿಕ್ಷಾ ವಿವರಗಳು:

ನೋಂದಣಿ ಸಂಖ್ಯೆ: KA-02-AF-5363

ಚಾಸಿ ನಂ: MD2A45AJ7GWB09787

ಇಂಜಿನ್ ನಂ: AJJWGB14108

ಮಾದರಿ: 2016 RE COMPACT LPG 4S

ಬಣ್ಣ: ಇಕೋ ಗ್ರೀನ್

ಮೌಲ್ಯ: ₹1,00,000

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರು ಯಾವುದೇ ಮಾಹಿತಿ ಇದ್ದರೆ ನಿಕಟದ ತೆಲಗು ಉಪನಗರಪೊಲೀಸ್ ಠಾಣೆಗೆ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

Related posts