ಸುದ್ದಿ 

ಮದ್ಯಪಾನ ಮಾಡಿ ಅಜಾಗರೂಕ ಚಾಲನೆ: ಕೆಂಪಾಪುರದಲ್ಲಿ ಚಾಲಕನ ವಿರುದ್ಧ ಪೊಲೀಸ್ ಕ್ರಮ

Taluknewsmedia.com

ಬೆಂಗಳೂರು, ಜುಲೈ 14
ನಗರದ ಕೆಂಪಾಪುರ ಬಸ್ ನಿಲ್ದಾಣದ ಬಳಿ ಮದ್ಯಪಾನ ಮಾಡಿಕೊಂಡು ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯ ವಿರುದ್ಧ ಪೊಲೀಸರು ಕಾನೂನು ಕ್ರಮ ಹೇರಿದ್ದಾರೆ.

ಜುಲೈ 12 ರಂದು ರಾತ್ರಿ, ಸ್ಥಳೀಯ ಪೊಲೀಸ್ ಠಾಣೆಯಿಂದ ಎ.ಎಸ್.ಐ. ಅನೀಲ್ ಕುಮಾರ ಕೆ., ಹೆಡ್ ಕಾನ್ಸ್‌ಟೇಬಲ್ ರಾಘವೇಂದ್ರ ನಾಯಕ (8122) ಹಾಗೂ ಇತರರು ಟ್ರಾಫಿಕ್ ಕರ್ತವ್ಯದಲ್ಲಿ ತೊಡಗಿದ್ದ ವೇಳೆ, ಸಾರ್ವಜನಿಕರೊಬ್ಬರು ಕಾರು ನಂಬರ್ KA-03-AH-3125 ನ ಚಾಲಕನು ಮದ್ಯಪಾನ ಮಾಡಿ ಅಪಾಯಕಾರಿಯಾಗಿ ಚಾಲನೆ ಮಾಡುತ್ತಿದ್ದಾನೆಂದು ಮಾಹಿತಿ ನೀಡಿದರು.

ತಕ್ಷಣ ದೌಡಾಯಿಸಿದ ಪೊಲೀಸರು ಕಾರನ್ನು ತಡೆದು ಪರಿಶೀಲಿಸಿದಾಗ, ಚಾಲಕನಿಂದ ಮದ್ಯಪಾನದ ವಾಸನೆ ಬಂದಿದ್ದು, ಆತನನ್ನು ಆಲೋಮೀಟರ್‌ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಯಲ್ಲಿ 274 MG/100 ML ಮಟ್ಟದ ಮದ್ಯಪಾನ ಪತ್ತೆಯಾಗಿಕಾನೂನುಬದ್ಧ ಮಿತಿಯನ್ನು ಮೀರಿರುವುದಾಗಿ ದೃಢಪಟ್ಟಿತು.

ಚಾಲಕನನ್ನು ದೀಪಕ್ ಡಿ.ಆರ್ (34), ಗಂಗಾನಗರದ ನಿವಾಸಿ ಎಂದು ಗುರುತಿಸಲಾಗಿದ್ದು, ಸ್ಥಳದಲ್ಲೇ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts