ಸುದ್ದಿ 

ಟವರ್ ಹಿಂಭಾಗದಿಂದ ಎಲೆಕ್ಟ್ರಿಕಲ್ ಕೇಬಲ್ ಕಳ್ಳತನ

Taluknewsmedia.com

ಬೆಂಗಳೂರು, ಜುಲೈ 17: 2025


ನಗರದ ಒಂದು ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನ ಟವರ್ ಹಿಂಭಾಗದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕಲ್ ಕೇಬಲ್ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ರೋಬಿನ್ ಆವರ ಪ್ರಕಾರ, ಅವರು ತಮ್ಮ ನಿವಾಸದಲ್ಲಿದ್ದಾಗ 13/07/2025 ರಂದು ಬೆಳಿಗ್ಗೆ ಸುಮಾರು 06:00 ಗಂಟೆಗೆ ಟವರ್-ಡಿ ಹಿಂಭಾಗದಿಂದ ಅಂದಾಜು 500ರಿಂದ 600 ಮೀಟರ್ ಉದ್ದದ ಎಲೆಕ್ಟ್ರಿಕಲ್ ಕೇಬಲ್‌ನ್ನು ಅಪರಿಚಿತ ವ್ಯಕ್ತಿಗಳು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಕೇಬಲ್‌ನ ಮೌಲ್ಯವನ್ನು ಸುಮಾರು 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ದೂರುದಾರರು ಈ ಬಗ್ಗೆ ಸುತ್ತಮುತ್ತ ಮಾಹಿತಿ ಕಲೆಹಾಕಿದರೂ ಯಾವುದೇ ಪತ್ತೆಯಾಗದೆ ಹಿನ್ನಲೆಯಲ್ಲಿ ಕೊನೆಗೆ ಪೊಲೀಸರು ಕೈಜೋಡಿಸಲು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.

Related posts