ಅನಧಿಕೃತ ಕಟ್ಟಡ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ ಮಹಿಳೆಗೆ ಹಲ್ಲೆ
ಬೆಂಗಳೂರು, ಜುಲೈ 18, 2025:
ಸಹಕಾರ ನಗರದಲ್ಲಿ ವಿಸ್ತಾರ ಹೋಟೆಲ್ ಮಾಲೀಕರ ವಿರುದ್ಧ ಒಂದು ಮಹಿಳೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶ್ರೀಮತಿ ರಮಾ ಅವರು ತಮ್ಮ ಪಿತ್ರಾರ್ಜಿತ ಕಟ್ಟಡದ 4ನೇ ಮತ್ತು 5ನೇ ಮಹಡಿಗಳನ್ನು ಹರಿನಾಥ್ ರೆಡ್ಡಿ ಎಂಬವರ ಹೋಟೆಲ್‌ಗೆ ಬಾಡಿಗೆಗೆ ನೀಡಿದ್ದಾರೆ.
ಆದರೆ ಇತ್ತೀಚೆಗೆ ಅವರು ಯಾವುದೇ ಅನುಮತಿ ಇಲ್ಲದೆ ಟೆರಸ್‌ನಲ್ಲಿ ಇನ್ನೊಂದು ಮಹಡಿ ಕಟ್ಟಲು ಆರಂಭಿಸಿದ್ದಾರೆ. ಇದನ್ನು ವಿರೋಧಿಸಿದಾಗ, ಆರೋಪಿಗಳು ಬೈದು, ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ. ರಮಾ ಅವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ತಗೆದುಕೊಳ್ಳುತ್ತಿದ್ದಾಗ, ಫೋನ್ ಕಿತ್ತು ಬಿಸಾಕಲಾಗಿದೆ ಮತ್ತು ಕೈಗೆ ಹೊಡೆದು ಗಾಯಗೊಳಿಸಲಾಗಿದೆ.
ಹೆಚ್ಚು ಕಷ್ಟಪಡಿಸುವುದಾಗಿ ಮತ್ತು ಜೀವಕ್ಕೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೋಟೆಲ್‌ನ ಕೆಲ ಕೆಲಸಗಾರರೂ ಸಹ ಗಲಾಟೆಯಲ್ಲಿ ಭಾಗವಹಿಸಿದ್ದಾರಂತೆ. ಇದೀಗ ಕೊಡುಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

