ಆಸ್ಪತ್ರೆಯ ಪಾರ್ಕಿಂಗ್‌ನಿಂದ ದ್ವಿಚಕ್ರ ವಾಹನ ಕಳ್ಳತನ ಬೆಂಗಳೂರು, ಜುಲೈ 17, 2025
ನಗರದ ಸೋಂಪುರ ಗೇಟ್‌ನಲ್ಲಿರುವ ಸ್ಪಂದನ ಆಸ್ಪತ್ರೆಯಲ್ಲಿ ಕೆಲಸಮಾಡುವ ವ್ಯಕ್ತಿಯೊಬ್ಬರ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಆಸ್ಪತ್ರೆಯ ಪಾರ್ಕಿಂಗ್‌ನಿಂದ ಕದ್ದೊಯ್ದಿರುವ ಘಟನೆ ದಾಖಲಾಗಿದೆ.
ಹರ್ಷಿತ್ ರವರು ಜುಲೈ 16ರಂದು ಸಂಜೆ 4.30ರ ವೇಳೆಗೆ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಅವರು ಪ್ರತಿದಿನ ಕಾರ್ಯಸ್ಥಳವಾದ ಸ್ಪಂದನ ಆಸ್ಪತ್ರೆಗೆ ಬರಲು ತಮ್ಮ ವೈಯಕ್ತಿಕ ವಾಹನವಾದ ಕೆಎ-01 ಜೆಎಫ್-0170 ಸಂಖ್ಯೆಯ ದ್ವಿಚಕ್ರ ವಾಹನವನ್ನು ಉಪಯೋಗಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಜುಲೈ 3, 2025 ರಂದು ಅವರು ಬೆಳಿಗ್ಗೆ 8.30ರ ವೇಳೆಗೆ ವಾಹನವನ್ನು ಆಸ್ಪತ್ರೆಯ ಪಾರ್ಕಿಂಗ್‌ನಲ್ಲಿ ನಿಲ್ಲಿಸಿ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಮದ್ಯಾಹ್ನ 2.30ರ ವೇಳೆಗೆ ವಾಪಸಾದಾಗ ತಮ್ಮ ವಾಹನವು ಅಲ್ಲಿಂದ ಕಳವಾಗಿರುವುದನ್ನು ಗಮನಿಸಿದ್ದಾರೆ. ತಕ್ಷಣ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಬೆಳಿಗ್ಗೆ 9.35ರ ಹೊತ್ತಿಗೆ ಯಾರೋ ಅಪರಿಚಿತ ವ್ಯಕ್ತಿ ವಾಹನವನ್ನು ತೆಗೆದುಕೊಂಡು ಹೋಗಿರುವ ದೃಶ್ಯ ಸೆರೆಯಾಗಿರುವುದು ಕಂಡುಬಂದಿದೆ.
ಹರ್ಷಿತ್ ರವರು ಸುತ್ತಮುತ್ತ ಹುಡುಕಿದರೂ ವಾಹನ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

