ಸುದ್ದಿ 

ಭೂಮಿ ಖರೀದಿಯ ನೆಪದಲ್ಲಿ ₹1.90 ಕೋಟಿ ವಂಚನೆ – ಪ್ರಕರಣ ದಾಖಲು

Taluknewsmedia.com

ಬೆಂಗಳೂರು ಜುಲೈ 19:2025


ತಾಲೂಕಿನ ದೊಡ್ಡ ಬೆಳವಂಗಲ ಹೋಬಳಿಯ ಕತ್ರಿ ಹೊಸಹಳ್ಳಿ ಗ್ರಾಮದಲ್ಲಿ ಜಮೀನನ್ನು ಖರೀದಿಸುವ ನೆಪದಲ್ಲಿ ವ್ಯಕ್ತಿಯೊಬ್ಬನಿಗೆ ₹1.90 ಕೋಟಿ ವಂಚಿಸಿದ ಪ್ರಕರಣ ದಾಖಲಾಗಿದೆ.

ಮೂರ್ತಿ ನಾಯಕ್ ಅವರು ನೀಡಿದ ದೂರಿನ ವಿವರದ ಪ್ರಕಾರ, ಅವರು ತಮ್ಮ ಸ್ವತ್ತಾದ ಜಮೀನನ್ನು ಜಗದೀಶ್ ಹಾಗೂ ಹನುಮಂತರಾಜು ಎಂಬವರಿಗೆ ಮಾರಾಟ ಮಾಡಲು ನಿರ್ಧಾರ ಮಾಡಿದ್ದರು. ಅವರು ಜಮೀನು ನೋಡಿ ಒಳ್ಳೆಯ ಬೆಲೆಗೆ ಮಾರಾಟ ಮಾಡಿಸುತ್ತೇವೆ ಎಂದು ನಂಬಿಸಿ, ದಿನಾಂಕ 24/06/2025 ರಂದು ಜಮೀನನ್ನು ತಮ್ಮ ಹೆಸರಿಗೆ ನೊಂದಾಯಿಸಿಕೊಂಡರು. ಮೊದಲ ಹೆಜ್ಜೆಯಾಗಿ ₹1.5 ಲಕ್ಷ ನೀಡಿದ್ದರು. ಉಳಿದ ಹಣವನ್ನು ನಂತರ ಚೆಕ್ ಮೂಲಕ ನೀಡುವುದಾಗಿ ಭರವಸೆ ನೀಡಿದರೂ ಅದನ್ನು ಪಾಲಿಸಲಿಲ್ಲ.

ಜುಲೈ 7ರಂದು ಹನುಮಂತರಾಜು ಪೀಡಿತರನ್ನು ತಮ್ಮ ಮನೆಗೆ ಕರೆಯಿಸಿ, ಪತ್ನಿಗೆ ಧಮ್ಕಿ ನೀಡಿದರಂತೆ. ಹಣ ನೀಡದಿದ್ದರೆ ಪತಿಯ ಜೀವಕ್ಕೆ ಅಪಾಯವೆಂದು ಬೆದರಿಸಿದ ಕಾರಣ, ಪತ್ನಿ ಮನೆಯಲ್ಲಿದ್ದ ₹1.90 ಕೋಟಿ ನಗದು ಹಣ ನೀಡಿ ಬಿಡಬೇಕಾದ ಸ್ಥಿತಿಗೆ ತಲುಪಿದ್ದಾರೆ. ಜೊತೆಗೆ ₹1.12 ಲಕ್ಷ ನಗದು ಹಣವೂ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಮೂರ್ತಿ ನಾಯಕ ಅಮೃತಳ್ಳಿಪೊಲೀಸರಿಗೆ ದೂರು ನೀಡಿದ್ದು, ಜಗದೀಶ್ ಹಾಗೂ ಹನುಮಂತರಾಜು ವಿರುದ್ಧ ಅಪರಾಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Related posts