ಭುವನೇಶ್ವರದಲ್ಲಿ ಬಾಡಿಗೆ ಮನೆ ಹೆಸರಿನಲ್ಲಿ ₹1.09 ಲಕ್ಷ ವಂಚನೆ
ಬೆಂಗಳೂರು, ಜುಲೈ 19:2025
ಮನೆ ಬಾಡಿಗೆ ಕೊಡಬೇಕೆಂದು ಆನ್‌ಲೈನ್‌ನಲ್ಲಿ ಮಾಹಿತಿ ಹಾಕಿದ್ದ ಮಹಿಳೆಗೆ ಮೋಸವಾಗಿರುವ ಘಟನೆ ನಡೆದಿದೆ.
ಅಶೀಷ್ ಕುಮಾರ್ ಪಹಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಸೇನೆ ಸೇರುವವನಾಗಿ ಗುರುತಿಸಿಕೊಂಡು ಮನೆ ಬಾಡಿಗೆಗಾಗಿ ಫೋಟೋ ಮತ್ತು ಲೋಕೇಶನ್ ಕಳುಹಿಸಲು ಕೇಳಿದ. ಮಹಿಳೆ ಫೋಟೋ ಕಳುಹಿಸಿದ್ದ ನಂತರ, ಅವನು ₹33,000 ಅಡ್ವಾನ್ಸ್ ನೀಡುತ್ತೇನೆ ಎಂದು ಹೇಳಿದ್ದ.
ಆದರೆ ನಂತರ ಗೂಗಲ್ ಪೇ ಮೂಲಕ ₹5 ಹಾಕಿ ನಿಯಮ ಪಾಲಿಸಬೇಕು ಎಂದು ಹೇಳಿ ಹಂತ ಹಂತವಾಗಿ ₹1,09,985 ರೂ. ಹಣ ವಂಚಿಸಲಾಗಿದೆ.
ಮಹಿಳೆ ಯಲಹಂಕ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ.

