ಸುದ್ದಿ 

ಹೆಸರಘಟ್ಟ ರಸ್ತೆ ಬಳಿ ಯುವಕನ ಮೇಲೆ ಕಾರು ಚಲಾಯಿಸಿ ಕೊಲೆ ಯತ್ನ – ಮೂವರಿಗೆ ವಿರುದ್ಧ ದೂರು

Taluknewsmedia.com

ಬೆಂಗಳೂರು, ಜುಲೈ 17, 2025: ಹೆಸರಘಟ್ಟ ಮುಖ್ಯ ರಸ್ತೆಯ ಜನಪ್ರಿಯ ಅಪಾರ್ಟ್ಮೆಂಟ್ ಬಳಿ ಭಯಾನಕ ಘಟನೆ ನಡೆದಿದೆ. ಹಣದ ವಿವಾದದಿಂದ ಮೂವರು ವ್ಯಕ್ತಿಗಳು ಯುವಕನ ಮೇಲೆ ಕಾರು ಹರಿಸಿ ಕೊಲೆ ಯತ್ನ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಪೀಡಿತ ವ್ಯಕ್ತಿಯು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಮಲ್ಲಿಕಾರ್ಜುನ ನವರು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಅವರ ತಂದೆಯೂ ಕನ್ಸ್ಟ್ರಕ್ಷನ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ‘ರಿಷಿ’ ಎಂಬಾತನು ಮಲ್ಲಿಕಾರ್ಜುನ ರಿಂದ ಹಣದ ಅಗತ್ಯವಿದೆ ಎಂದು ಹೇಳಿ ರೂ. 15,000 ಪಡೆದುಕೊಂಡಿದ್ದನು. ಆದರೆ ಹಣವನ್ನು ಹಿಂದಿರುಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ, ವಿಳಂಬ ಮಾಡುತ್ತಿದ್ದ ರಿಷಿ, ಮಲ್ಲಿಕಾರ್ಜುನ ನವರಿಗೆ ತಮ್ಮನಿಗೆ “ನಿನ್ನ ಅಣ್ಣನು ಮತ್ತೆ ಹಣ ಕೇಳಿದರೆ, ಕೊಲೆ ಮಾಡುತ್ತೇನೆ” ಎಂದು life-threatening ಬೆದರಿಕೆ ಹಾಕಿದ್ದನು.

06 ಜುಲೈ 2025 ರಂದು ಮಧ್ಯರಾತ್ರಿ, ರಿಷಿಯ ಸ್ನೇಹಿತ ಜೀವನ್ ದೂರವಾಣಿ ಮೂಲಕ ಕರೆಮಾಡಿ, “ಹಣವನ್ನು ಕೊಡ್ತೀವಿ, ಹೆಸರಘಟ್ಟ ಮುಖ್ಯ ರಸ್ತೆಯ ಜನಪ್ರಿಯ ಅಪಾರ್ಟ್ಮೆಂಟ್ ಹತ್ತಿರ ಬಾ” ಎಂದು ಹೇಳಿದ್ದಾನೆ. ಪಿರ್ಯಾದಿದಾರರು ತಮ್ಮ ತಮ್ಮ ಗೋಪಿಕೃಷ್ಣ ಹಾಗೂ ತಂಗಿಯ ಗಂಡ ಬಸವರಾಜ್ ಅವರೊಂದಿಗೆ ಈ ಸ್ಥಳಕ್ಕೆ ಹೋಗಿದ್ದರು.

ಸ್ಥಳಕ್ಕೆ ಹೋಗಿದಾಗ KA-05 AP-0285 ನೋಂದಣಿಯ ವೈಗನ್‌ಆರ್ ಕಾರಿನಲ್ಲಿ ಕಾಯುತ್ತಿದ್ದ ರಿಷಿ, ಜೀವನ್ ಮತ್ತು ಹೇಮಂತ್ ಮಲ್ಲಿಕಾರ್ಜುನ ಅವರನ್ನು ಗುದ್ದಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಮಲ್ಲಿಕಾರ್ಜುನನವರು ಕಾರಿನ ಮೇಲಕ್ಕೇರಿದರೂ ಕೂಡ, ಕೆಲ ದೂರದವರೆಗೆ ಕಾರು ನಿಲ್ಲಿಸದೆ ವೇಗವಾಗಿ ಓಡಿಸಿ ಜೀವ ಅಪಾಯಕ್ಕೆ ಗುರಿಮಾಡಲಾಗಿದೆ.

ಘಟನೆಯ ನಂತರ ಸ್ಥಳೀಯ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ರಿಷಿ, ಜೀವನ್ ಮತ್ತು ಹೇಮಂತ್ ವಿರುದ್ಧ ಹತ್ಯೆ ಯತ್ನ,life threat, ಮತ್ತು ಅಪರಾಧ ಶಕ್ಯತೆಗಳ ಪ್ರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Related posts