ಕಟ್ಟಡದಲ್ಲಿ ಕೆಲಸ ವೇಳೆ ಕಾರ್ಮಿಕನ ದುರ್ಘಟನೆ ಸಾವು
ಬೆಂಗಳೂರು, ಜುಲೈ 20–2025
ಚಿಕ್ಕಜಾಲದ ಪುರವ ಏರೋಸಿಟಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ಅಕ್ರಮುಲ್ ಹುಸೇನ್ (35) ಅವರು ದುರ್ಘಟನೆಯಿಂದ ಮೃತಪಟ್ಟಿದ್ದಾರೆ.
ಮೃತನ ಪತ್ನಿಯ ದೂರಿನ ಪ್ರಕಾರ, ತಮ್ಮ ಗಂಡನು ಸ್ಟೀಲ್ ಹೋಲ್ಡಿಂಗ್ ಕೆಲಸ ಮಾಡುತ್ತಿದ್ದು, ಜುಲೈ 17 ರಂದು ಬೆಳಿಗ್ಗೆ 8:30ಕ್ಕೆ ಚಿಕ್ಕಜಾಲಕ್ಕೆ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 2:00 ಗಂಟೆಗೆ ಕರೆಮಾಡಿ, ಕೆಲಸದ ಸ್ಥಳದಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಕೆಲಸ ಮಾಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅದೇ ದಿನ ಸಂಜೆ 6:45ರ ಹೊತ್ತಿಗೆ, ಅಕ್ರಮುಲ್ ಅವರ ತಲೆಯ ಮೇಲೆ ಕಟ್ಟಡದ ಮೇಲಿನಿಂದ ಕಬ್ಬಿಣದ ಬಿಸಿ ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಆದರೆ ಅವರು ಮೃತರಾದರು.
ಮೃತನ ಪತ್ನಿಯವರು, ಕಟ್ಟಡ ನಿರ್ಮಾಣ ಕಂಪನಿಗಳು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷ್ಯದಿಂದ ಕೆಲಸ ಮಾಡಿಸುತ್ತಿದ್ದವು ಎಂದು ಆರೋಪಿಸಿದ್ದಾರೆ. ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

